ಬುಲ್ಡೋಜರ್ ಬಾಬಾ ಹೆಸರಲ್ಲೇ ಟೀ ಶಾಪ್!
Team Udayavani, Apr 13, 2022, 7:50 AM IST
ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಸಿಎಂ ಹುದ್ದೆಗೇರುವುದರ ಜೊತೆಗೆ ಯೋಗಿ ಆದಿತ್ಯನಾಥ ಅವರು “ಬುಲ್ಡೋಜರ್ ಬಾಬಾ’ ಆಗಿಯೂ ಪ್ರಸಿದ್ಧಿ ಪಡೆದಿದ್ದು ಗೊತ್ತೇ ಇದೆ.
ಹೊಸ ಸುದ್ದಿಯೇನೆಂದರೆ, ಅವರ ಅಭಿಮಾನಿಗಳೂ ಈಗ “ಬುಲ್ಡೋಜರ್ ಬಾಬಾ’ ಹೆಸರಿನಲ್ಲೇ ಟೀ ಶಾಪ್ ನಡೆಸಲಾರಂಭಿಸಿದ್ದಾರೆ!
ವಾರಾಣಸಿಯ ರಾಮ್ ಸೂರತ್ ಯಾದವ್ ಮತ್ತು ಅವರ ಮಗ ಚಂದ್ರೇಶ್ ಯಾದವ್, ಯೋಗಿ ಅವರ ಅಪ್ಪಟ ಅಭಿಮಾನಿಗಳಂತೆ. ಚಿಕ್ಕದೊಂದು ಟೀ ಸ್ಟಾಲ್ ನಡೆಸುತ್ತಿರುವ ಅವರು, ಯೋಗಿ 2ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ತಮ್ಮ ಅಂಗಡಿಯ ಹೆಸರನ್ನು “ಬುಲ್ಡೋಜರ್ ಬಾಬಾ ಟೀ ಸ್ಟಾಲ್’ ಎಂದು ಬದಲಿಸಿದ್ದಾರೆ.
“ನಮ್ಮ ಟೀ ಕೂಡ ಬುಲ್ಡೋಜರ್ ರೀತಿಯೇ ಖಡಕ್. ಕುಡಿದಾಕ್ಷಣ ಕಿಕ್ ಕೊಡುತ್ತದೆ’ ಎನ್ನುತ್ತಾರೆ ಅಂಗಡಿ ಮಾಲೀಕ ರಾಮ್ ಸೂರತ್.