ಕಂದಕಕ್ಕೆ ಉರುಳಿದ ಬಸ್; 43 ಮಂದಿ ಸಾವು; 25 ಮಂದಿ ಗಂಭೀರ!
Team Udayavani, Sep 11, 2018, 3:10 PM IST
ಕೊಂಡಗಟ್ಟು: ತೆಲಂಗಾಣದಲ್ಲಿ ಮಂಗಳವಾರ ರಣ ಭೀಕರ ಅಪಘಾತವೊಂದು ನಡೆದಿದ್ದು 43 ಮಂದಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಗಿತ್ಯಾಲ್ ಜಿಲ್ಲೆಯ ಕೊಂಡಗಟ್ಟುವಿನ ಘಾಟಿ ಪ್ರದೇಶದಲ್ಲಿ ಬೆಳಗ್ಗೆ 12 ಗಂಟೆಯ ವೇಳೆ ಈ ಘೋರ ದುರಂತ ನಡೆದಿದ್ದು , ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಮೃತರ ಪೈಕಿ 25 ಮಂದಿ ಮಹಿಳೆಯರು ಮತ್ತು 7 ಮಂದಿ ಮಕ್ಕಳು ಎಂದು ತಿಳಿದು ಬಂದಿದೆ. 8 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳದಲ್ಲಿ ರಕ್ತ ನದಿಯೋಪಾದಿಯಲ್ಲಿ ಹರಿದಿದೆ.
ಗಾಯಾಳುಗಳಿಗೆ ಕರೀಂ ಗರ್ ಮತ್ತು ಜಗಿತ್ಯಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕೊಂಡಗಟ್ಟುವಿನಲ್ಲಿ ಹನುಮಂತನ ದೇವಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು ಮಂಗಳವಾರ ಮತ್ತು ಶನಿವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ
ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್ಚೇಂಜರ್ ಉಪಗ್ರಹ ಉಡಾವಣೆ
ಸೋಮವಾರದಿಂದ ಬಜೆಟ್ ಅಧಿವೇಶನದ 2ನೇ ಹಂತ ಕಲಾಪ ಆರಂಭ
ರೇಷನ್ ಕಾರ್ಡ್ ಇರುವ ಪ್ರತೀ ಗೃಹಿಣಿಗೂ ತಿಂಗಳಿಗೆ 1000 ರೂ : ಸ್ಟಾಲಿನ್
ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ರಾಜ್ಯ ಬಜೆಟ್-2021 : ಕಳಸಾ-ಬಂಡೂರಿ ಯೋಜನೆಗೆ ಭರ್ಜರಿ ಅನುದಾನ ಘೋಷಣೆ
ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ, ಕುರಿ, ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ ಘೋಷಣೆ
ಪುರುಷನೆ ಅಪರಾಧಿ, ಮಹಿಳೆಯೆ ಸಂತ್ರಸ್ತೆ ಎಂಬ ಮನಃಸ್ಥಿತಿಯಿಂದ ಹೊರಬರುವುದು ಅನಿವಾರ್ಯ.!?
ನಿರ್ದಿಷ್ಟ ಗುರಿ- ಕಾರಣ ಇಲ್ಲದ, ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್: ಪರಮೇಶ್ವರ್ ಟೀಕೆ
ಕರ್ನಾಟಕ ಬಜೆಟ್ 2021: ಮಹಿಳೆಯರಿಗೆ ಬಂಪರ್ ಯೋಜನೆ ಘೋಷಣೆ, ಶೇ.4ರ ಬಡ್ಡಿದರದಲ್ಲಿ 2 ಕೋಟಿ ಸಾಲ