ಕಾಲೇಜು ಹುಡುಗಿಯರಿಗೆ ಕಿರುಕುಳ: ಬಸ್ ಕಂಡಕ್ಟರ್ ಅರೆಸ್ಟ್
Team Udayavani, Sep 8, 2018, 4:41 PM IST
ಈರೋಡ್ : ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಚಲಿಸುವ ಬಸ್ಸಿನಲ್ಲಿ ಅನುಚಿತವಾಗಿ (ಲೈಂಗಿಕವಾಗಿ) ದುರ್ವರ್ತನೆ ತೋರುತ್ತಿದ್ದ ಸರಕಾರಿ ಬಸ್ಸಿನ ಕಂಡಕ್ಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
ಬಸ್ಸಿನಲ್ಲಿ ನಿತ್ಯ ಕಾಲೇಜಿಗೆ ಹೋಗುವ ಹುಡುಗಿಯರನ್ನು ಗುರಿ ಇರಿಸಿ ಅಶ್ಲೀಲ ಹಾಡು ಹೇಳುತ್ತಾ ಕೆಟ್ಟ ಪದಗಳನ್ನು ಬಳಸುತ್ತಾ ಕಿರುಕುಳ ನೀಡುತ್ತಿದ್ದ ಅಯ್ಯಪ್ಪನ್ (31) ಎಂಬ ರಾಜ್ಯ ಸಾರಿಗೆ ನಿಗಮದ ಬಸ್ ಕಂಡಕ್ಟರ್ ವಿರುದ್ಧ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ಅಯ್ಯಪ್ಪನ್ ನನ್ನು ಬಿಡಿಸಲು ಠಾಣೆಗೆ ಹೋಗಿದ್ದ ಸಾರಿಗೆ ನಿಗಮದ ಕೆಲ ನೌಕರರು ಮತ್ತು ನೌಕರ ಸಂಘದ ನಾಯಕರು, ಅಯ್ಯಪ್ಪನ್ ವಿರುದ್ಧದ ದೂರನ್ನು ಹಿಂಪಡೆಯುವಂತೆ ವಿದ್ಯಾರ್ಥಿನಿಯರಿಗೆ ತಾಕೀತು ಮಾಡಿದರು. ಆದರೆ ಅದಕ್ಕೆ ಅವರು ಒಪ್ಪಲಿಲ್ಲ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ