ಸೆಂಟ್ರಲ್ ಬ್ಯಾಂಕ್ನ 600 ಶಾಖೆ ಬಂದ್?
Team Udayavani, May 6, 2022, 7:40 AM IST
ಮುಂಬೈ: ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ 600 ಶಾಖೆಗಳನ್ನು ಮುಚ್ಚಲಾಗುತ್ತದೆ ಅಥವಾ ವಿಲೀನಗೊಳಿಸುವ ಸಾಧ್ಯತೆ ಇದೆ. ಅಂದರೆ ಶೇ.13ರಷ್ಟು ಶಾಖೆಗಳನ್ನು ಈ ನಿರ್ಧಾರದ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖೀಸಿ “ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂದಿನ ವರ್ಷದ ಮಾರ್ಚ್ ಅಂತ್ಯದ ಒಳಗಾಗಿ ಈ ನಿರ್ಧಾರ ಜಾರಿಯಾಗಲಿದೆ. 1911 ಡಿ.21ರಂದು ಸ್ಥಾಪನೆಯಾಗಿದ್ದ ಈ ಬ್ಯಾಂಕ್ಗೆ 110 ವರ್ಷಗಳ ಇತಿಹಾಸವಿದೆ. ಸದ್ಯ ದೇಶದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ 4,594 ಶಾಖೆಗಳು ಕಾರ್ಯವೆಸಗುತ್ತಿವೆ. ಸದ್ಯ ಅದು ಆರ್ಥಿಕವಾಗಿ ನಷ್ಟವನ್ನೂ ಹೊಂದಿದೆ.
ಹೀಗಾಗಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಬ್ಯಾಂಕ್ನ ಆಡಳಿತ ಮಂಡಳಿ ಕಠಿಣ ನಿರ್ಧಾ ರಕ್ಕೆ ಬಂದಿದೆ ಎಂದು ಹೇಳಲಾಗಿದೆ. 2021ರ ಡಿಸೆಂಬರ್ ಅಂತ್ಯಕ್ಕೆ 37.1 ಮಿಲಿಯ ಡಾಲರ್ ಲಾಭ ದಾಖಲಿಸಿತ್ತು. ಅದರ ಎನ್ಪಿಎ ಪ್ರಮಾಣ ಶೇ.15.16 ಆಗಿದೆ