Udayavni Special

ಭಗವಾನ್‌,ಅಲ್ಲಾ ಹೆಸರಲ್ಲಿ ಮಕ್ಕಳು;ರಾಜ್ಯಸಭೆಯಲ್ಲಿ ಜನಸಂಖ್ಯಾ ಸ್ಫೋಟ

Team Udayavani, Aug 6, 2018, 4:27 PM IST

population-explosion-700.jpg

ಹೊಸದಿಲ್ಲಿ : “ಭಗವಾನ್‌, ಅಲ್ಲಾ ಹೆಸರಿನಲ್ಲಿ ನಮ್ಮ ದೇಶದಲ್ಲಿ ಮಕ್ಕಳು ಹುಟ್ಟುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ಜನಸಂಖ್ಯೆ 36 ಕೋಟಿ ಇತ್ತು; ಇವತ್ತು ಅದು 135 ಕೋಟಿಗೆ ಏರಿದೆ; ವರ್ಷಂಪ್ರತಿ ದೇಶದ ಜನಸಂಖ್ಯೆ ಎರಡು ಕೋಟಿ ಹೆಚ್ಚುತ್ತಿದೆ’ ಎಂದು ಬಿಜೆಪಿ ನಾಯಕ ವಿಜಯ್‌ ಪಾಲ್‌ ಸಿಂಗ್‌ ತೋಮರ್‌ ಅವರಿಂದು ರಾಜ್ಯಸಭೆಯಲ್ಲಿ ‘ದೇಶದಲ್ಲಿ ಜನಸಂಖ್ಯಾ ಸ್ಫೋಟ’ದ ಮೇಲಿನ ಚರ್ಚೆಯಲ್ಲಿ ಉದ್ಗರಿಸಿದರು. 

“ಭೂಮಿಯ ಶೇ.2.4ರಷ್ಟು ಸ್ಥಳವನ್ನು ಮಾತ್ರವೇ ಭಾರತ ಹೊಂದಿದೆ; ಆದರೆ ಅದೇ ವೇಳೆ ವಿಶ್ವ ಜನಸಂಖ್ಯೆಯ ಶೇ.17.5ರಷ್ಟನ್ನು ಭಾರತ ಹೊಂದಿದೆ. ದೇಶದಲ್ಲಿನ ಅಭಿವೃದ್ಧಿ ಕಾರ್ಯಗಳೆಲ್ಲ ಜನಸಂಖ್ಯಾ ಸ್ಫೋಟದಿಂದಾಗಿ ನಿರರ್ಥಕವಾಗುತ್ತಿವೆ’ ಎಂದು ತೋಮರ್‌ ಹೇಳಿದರು. 

ದೇಶದ ಜನಸಂಖ್ಯಾ ಸ್ಫೋಟವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಚರ್ಚೆ ರಾಜ್ಯಸಭೆಯಲ್ಲಿ ನಡೆಯಿತು. 

ಬಿಜೆಪಿಯ ಅಶೋಕ್‌ ಬಾಜಪೇಯಿ ಅವರು “ಚೀನವನ್ನು ಹಿಂದಿಕ್ಕಿ ಭಾರತ 2022ರಲ್ಲಿ ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಲಿದ್ದು  2050ರ ವೇಳೆಗೆ  ನಮ್ಮ ದೇಶ 1.66 ಶತಕೋಟಿ ಜನರಿಗೆ ಮನೆಯಾಗಲಿದೆ’ ಎಂದು ಹೇಳಿದರು. ಜನಸಂಖ್ಯಾ ಸ್ಫೋಟವನ್ನು ತಡೆಯಲು ಖಚಿತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದವರು ಹೇಳಿದರು. 

ಸಮಾಜವಾದಿ ಪಕ್ಷದ ಸದಸ್ಯ ಜಾವೇದ್‌ ಅಲಿ ಖಾನ್‌ ಅವರು ಮಾತನಾಡಿ, “ಅಲ್ಪಸಂಖ್ಯಾಕರ ಶಿಕ್ಷಣ ಮತ್ತು ಆರ್ಥಿಕ ನೆರವಿಗಾಗಿ ಹಲವಾರು ಸಂಸ್ಥೆಗಳನ್ನು ಸರಕಾರ ಸ್ಥಾಪಿಸಿದೆಯಾದರೂ ಸಕಾಲಿಕ ನೇಮಕಾತಿ ಇಲ್ಲದ ಕಾರಣಕ್ಕೆ ಅವು ಬಹುತೇಕ ನಿಷ್ಕ್ರಿಯವಾಗಿವೆ’ ಎಂದು ಹೇಳಿದರು. 

ಮೌಲಾನಾ ಶಿಕ್ಷಣ ಪ್ರತಿಷ್ಠಾನಕ್ಕೆ ನಿರ್ದೇಶಕರಿಲ್ಲದೆ 3 ವರ್ಷಗಳಾಗಿವೆ; ಕೇವಲ 6 ತಿಂಗಳ ಹಿಂದಷ್ಟೇ ಈ ಹುದ್ದೆಗೆ ನೇಮಕಾತಿ ನಡೆದಿದೆ. ರಾಷ್ಟ್ರೀಯ ಅಲ್ಪಸಂಖ್ಯಾಕ ಅಭಿವೃದ್ಧಿ ಹಣಕಾಸು ನಿಗಮಕ್ಕೆ ಕೂಡ ಅಧ್ಯಕ್ಷರಿಲ್ಲದೆ 3 ವರ್ಷಗಳಾಗಿವೆ; ಕೇವಲ 3 ತಿಂಗಳ ಹಿಂದಷ್ಟೇ ಈ ನೇಮಕಾತಿ ಮಾಡಲಾಗಿದೆ’ ಎಂದು ಖಾನ್‌ ಹೇಳಿದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ipl-chennai-mumbai

ಐಪಿಎಲ್ ಕಲರವ ಆರಂಭ: ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ

ಹಾವೇರಿ : ಕೋವಿಡ್ ಸೋಂಕಿಗೆ ಓರ್ವ ಬಲಿ: 109 ಹೊಸ ಪ್ರಕರಣ ದೃಢ

ಹಾವೇರಿ : ಕೋವಿಡ್ ಸೋಂಕಿಗೆ ಓರ್ವ ಬಲಿ: 109 ಹೊಸ ಪ್ರಕರಣ ದೃಢ

ಅಡ್ವಾಣಿ ಎದುರು ಸ್ಪರ್ಧೆ,15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ಖನ್ನಾ ವಿವಾಹ

ಅಡ್ವಾಣಿ ಎದುರು ಸ್ಪರ್ಧೆ, 15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ವಿವಾಹ! ಪ್ರಿಯತಮೆ ಮುನಿಸು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಪರಿಶಿಷ್ಟರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ 70 ಹುದ್ದೆ ಖಾಲಿ!

ಪರಿಶಿಷ್ಟರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ 70 ಹುದ್ದೆ ಖಾಲಿ!

1859 ಕೋಟಿ ವೆಚ್ಚದಲ್ಲಿ ಜಲಧಾರೆ ಯೋಜನೆ ಸಿದ್ಧ

1859 ಕೋಟಿ ವೆಚ್ಚದಲ್ಲಿ ಜಲಧಾರೆ ಯೋಜನೆ ಸಿದ್ಧ

ಕೆರೆ ಕಟ್ಟೆ ಭರ್ತಿ; ಮುನ್ನೆಚ್ಚರಿಕೆಗೆ ಸೂಚನೆ

ಕೆರೆ ಕಟ್ಟೆ ಭರ್ತಿ; ಮುನ್ನೆಚ್ಚರಿಕೆಗೆ ಸೂಚನೆ

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.