ಸಿಜೆಐ ಕೇಸ್‌: ನ್ಯಾ| ಬೋಬ್ಡೆ ಭೇಟಿ ಆಗಿಲ್ಲವೆಂದು ಸ್ಪಷ್ಟನೆ

Team Udayavani, May 6, 2019, 6:00 AM IST

ಹೊಸದಿಲ್ಲಿ: ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ಸಮಿತಿಯ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆಯವರನ್ನು ನ್ಯಾ| ಆರ್‌.ಎಫ್. ನಾರಿಮನ್‌, ಡಿ.ವೈ. ಚಂದ್ರಚೂಡ್‌ ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಿದೆ.

ಶುಕ್ರವಾರ ಸಂಜೆ ಭೇಟಿಯಾಗಿದ್ದಾರೆ ಎಂದು ವರದಿಯಾಗಿದ್ದು, ನ್ಯಾಯ ಪೀಠವು ವಿಚಾರಣೆ ನಡೆಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಎಂದು ಸುಪ್ರೀಂ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ದೂರು ನೀಡಿರುವ ಮಹಿಳೆಯು ವಿಚಾರಣೆಯಿಂದ ದೂರವುಳಿಯಲು ನಿರ್ಧರಿಸಿ ದ್ದಾರೆ. ಆದರೂ ವಿಚಾರಣೆಯನ್ನು ನ್ಯಾಯಪೀಠ ಮುಂದುವರಿ ಸುತ್ತಿದ್ದು, ಇದು ಸರಿಯಲ್ಲ ಎಂಬ ಅಭಿಪ್ರಾಯ ವನ್ನು ಇಬ್ಬರು ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ