ಕೋಸ್ಟಲ್‌ ರೋಡ್‌ ಯೋಜನೆ: ಹೈಕೋರ್ಟ್‌ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ

Team Udayavani, May 8, 2019, 1:47 PM IST

1-m

ಮುಂಬಯಿ: ಕೋಸ್ಟಲ್‌ ರೋಡ್‌ ಯೋಜನೆಯ ನಿರ್ಮಾಣದ ಮೇಲೆ ಬಾಂಬೆ ಹೈಕೋರ್ಟ್‌ ಹೇರಿದ್ದ ತಡೆಯಾಜ್ಞೆ ಆದೇಶವನ್ನು ಸೋಮವಾರ ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ. ನ್ಯಾಯಾಲಯದಿಂದ ನೆಮ್ಮದಿ ಸಿಗುತ್ತಿದ್ದಂತೆಯೇ ಬೃಹನ್ಮುಂಬಯಿ ಮಹಾನಗರ ಪಾಲಿಕೆಯು (ಬಿಎಂಸಿ) ಅಮರ್ಸನ್‌ ಗಾರ್ಡನ್‌ನಲ್ಲಿ ಯೋಜನೆಯ ಕೆಲಸವನ್ನು ಪುನರಾರಂಭಿಸಿದೆ.

ಬಾಂಬೆ ಹೈಕೋರ್ಟ್‌ ತನ್ನ ಎ. 23ರ ಆದೇಶದಲ್ಲಿ ಕೋಸ್ಟಲ್‌ ರೋಡ್‌ ಯೋಜನೆಯ ಕೆಲಸಗಳ ಮೇಲೆ ಸಂಪೂರ್ಣವಾಗಿ ತಡೆಯನ್ನು ಹೇರಿತ್ತು. ಸುಪ್ರೀಂ ಕೋರ್ಟ್‌ ಬಾಂಬೆ ಹೈಕೋರ್ಟ್‌ ಎಪ್ರಿಲ್‌ನ ಆದೇಶವನ್ನು ಬದಲಾಯಿಸಿದ್ದು, ಯಾವುದೇ ಹೊಸ ಪ್ರದೇಶದಲ್ಲಿ ಯಾವುದೇ ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಬಾರದೆಂಬ ಷರತ್ತಿನ ಮೇರೆಗೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಮುಂದುವರಿಸಲು ಅದು ಗುತ್ತಿಗೆದಾರರಿಗೆ ಅವಕಾಶವನ್ನು ನೀಡಿದೆ. ಕರಾವಳಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಗುತ್ತಿಗೆದಾರರು ಮತ್ತು ಬಿಎಂಸಿ ತಮ್ಮ ಸ್ವಂತ ಅಪಾಯದ ಮೇಲೆ ಪೂರ್ಣಗೊಳಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖೀಸಲಾಗಿರುವ‌ ಅಂಶಗಳನ್ನು ನಾವು ಅನುಸರಿಸಲಿದ್ದೇವೆ ಮತ್ತು ಅದರ ಪ್ರಕಾರವಾಗಿ ಕೆಲಸವನ್ನು ಕೈಗೆತ್ತಿಕೊÛಲಾಗುವುದು ಎಂದು ಕೋಸ್ಟಲ್‌ ರೋಡ್‌ ಯೋಜನೆಯ ಮುಖ್ಯ ಎಂಜಿನಿಯರ್‌ ಮೋಹನ್‌ ಮಚಿವಾಲಾ ತಿಳಿಸಿದ್ದಾರೆ. ಈ ಯೋಜನೆಯು ನಗರದ ಸಮುದ್ರ ಕರಾವಳಿಯ ಪರಿಸರ ವಿಜ್ಞಾನದ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರು ಮತ್ತು ಸೊಸೈಟಿ ಫಾರ್‌ ಇಂಪ್ರೂವ್‌ಮೆಂಟ್‌ ಆಫ್‌ ಗೀನರಿ ಆ್ಯಂಡ್‌ ನೇಚರ್‌ ಎಂಬ ಎನ್‌ಜಿಒ ಕಡೆಯಿಂದ ಕೋಸ್ಟಲ್‌ ರೋಡ್‌ ಯೋಜನೆಯ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸಲ್ಲಿಸಲಾಗಿತ್ತು. ಎಪ್ರಿಲ್‌ನಲ್ಲಿ ಹೈಕೋರ್ಟ್‌ ಭುಲಾಭಾಯಿ ದೇಸಾಯಿ ರಸ್ತೆಯ ಅಮರ್ಸನ್‌ ಉದ್ಯಾನದಲ್ಲಿ ಮರಗಳ ಕತ್ತರಿಸುವಿಕೆ ಹಾಗೂ ಯೋಜನೆಯ ಪರಿಸರ ಅನುಮತಿಯ ಕೊರತೆಯ ವಿರುದ್ಧವಾಗಿ ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸಿತು ಮತ್ತು ಜೂ.3ರ ತನ್ನ ಮುಂದಿನ ಆದೇಶದ ತನಕ ಯೋಜನೆಯ ಕೆಲಸಗಳನ್ನು ಮುಂದುವರಿಸದಂತೆ ಬಿಎಂಸಿಗೆ ತಡೆಯನ್ನು ಹೇರಿತ್ತು. ಇದಾದ ಬಳಿಕ ಕೆಲಸ ಮುಂದುವರಿಸಲು ಅನುಮತಿಯನ್ನು ಕೋರಿ ಬಿಎಂಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಜೂನ್‌ನಲ್ಲಿ ಹೇಗೂ ವಿಚಾರಣೆ ನಡೆಯಲಿಕ್ಕಿದ್ದು, ಅಲ್ಲಿಯ ತನಕ ಕೆಲಸದ ಮೇಲೆ ತಡೆ ಹೇರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಉಪನಗರಗಳಿಗೆ ಸಂಪರ್ಕ
ಮಹತ್ವಾಕಾಂಕ್ಷೆಯ 29.2 ಕಿ.ಮೀ. ಉದ್ದದ ಕೋಸ್ಟಲ್‌ ರೋಡ್‌ ಯೋಜನೆಯು ಸುರಂಗಗಳ ಸಂಯೋಜನೆ, ಸಮುದ್ರದಲ್ಲಿ ಭೂಮಿಯ ಪುನಃಸ್ಥಾಪನೆ ಮತ್ತು ಎಲೆವೇಟೆಡ್‌ ರಸ್ತೆಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಕರಾವಳಿಯ ಉಪನಗರಗಳಿಗೆ ಸಂಪರ್ಕಿಸಲಿದೆ. ಬಿಎಂಸಿಯ ಯೋಜನೆಗಳ ಪ್ರಕಾರ, ಇದು ಪ್ರಿನ್ಸೆಸ್‌ ಸ್ಟ್ರೀಟ್‌, ಮರೀನ್‌ ಲೈನ್ಸ್‌ನಿಂದ ಪ್ರಾರಂಭವಾಗಿ ಉಪನಗರ ಕಾಂದಿವಲಿಗೆ ಜೋಡಣೆಯಾಗಲಿದೆ. ಇದು ಎರಡು ಮೀಸಲಾದ ಬಸ್‌ ಲೇನ್‌ಗಳೊಂದಿಗೆ ಎಂಟು ಲೇನ್‌ಗಳನ್ನು ಹೊಂದಿರಲಿದೆ.

ಟಾಪ್ ನ್ಯೂಸ್

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

naksal (2)

ನಕ್ಸಲರನ್ನು ಬೇರು ಸಮೇತ ಕಿತ್ತೂಗೆಯುತ್ತೇವೆ: ಅಮಿತ್‌ ಶಾ

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.