ಹಿಂದೋನ್ ವಿಮಾನ ನಿಲ್ದಾಣ: ಜೂನ್ ಅಂತ್ಯಕ್ಕೆ ವಾಣಿಜ್ಯ ಹಾರಾಟ ಕಾರ್ಯಾರಂಭ
Team Udayavani, May 28, 2019, 3:51 PM IST
ಹೊಸದಿಲ್ಲಿ: ದಿಲ್ಲಿಗೆ ಸಮೀಪದಲ್ಲೇ ಇರುವ ಹಿಂದೋನ್ ವಿಮಾನ ನಿಲ್ದಾಣ ಇದೇ ಜೂನ್ ಅಂತ್ಯದೊಳಗೆ ವಾಣಿಜ್ಯ ಹಾರಾಟ ಕಾರ್ಯನಿರ್ವಹಣೆ ಆರಂಭಿಸಲಿದೆ. ರಕ್ಷಣಾ ಸಚಿವಾಲಯ ಇದಕ್ಕೆ ಬೇಕಾದ ಎಲ್ಲ ಅನುಮತಿಗಳನ್ನು ನೀಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಹಿಂದೋನ್ ವಿಮಾನ ನಿಲ್ದಾಣವು ಭಾರತೀಯ ವಾಯು ಪಡೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದೆ. ಅಂತೆಯೇ ಅವು ಇಲ್ಲಿ ಪೌರ ವಾಯು ಯಾನ ಸೇವಾ ಸೌಕರ್ಯವನ್ನು ರೂಪಿಸಿವೆ.
ಪ್ರಾದೇಶಿಕ ವಾಯು ಸಂಪರ್ಕ ಯೋಜನೆ (ಆರ್ಸಿಎಸ್) ಪ್ರಕಾರ ನಾಗರಿಕ ವಾಯು ಯಾನ ಸೇವಾ ಕಾರ್ಯ ಆರಂಭಿಸುವ ಗೋಧಾವತ್ ಎಂಟರ್ಪ್ರೈಸಸ್ ನ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ