ಸಂವಿಧಾನ ನಾಶಕ್ಕೆ ಕಾಂಗ್ರೆಸ್ ಬಿಡದು : ಸಂವಿಧಾನ ದಿನದಂದು ರಾಹುಲ್
Team Udayavani, Nov 26, 2018, 3:56 PM IST
ಹೊಸದಿಲ್ಲಿ : ”ದೇಶದ ಸಂವಿಧಾನವನ್ನು ನಾಶ ಮಾಡುವ ಸಂಚು ಹೂಡುವವರಿಗೆ ಅಂತಹ ಯಾವುದೇ ಸಾಮರ್ಥ್ಯ ಇಲ್ಲ ಮತ್ತು ಕಾಂಗ್ರೆಸ್ ಪಕ್ಷ ಅವರಿಗೆ ಅಂಥ ಯಾವ ದುಸ್ಸಾಹಸವನ್ನೂ ಮಾಡಲು ಬಿಡುವುದಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಸಂವಿಧಾನ ದಿನದ ಸಂದರ್ಭದಲ್ಲಿ ಹೇಳಿದ್ದಾರೆ.
“ನಮ್ಮ ಪ್ರತಿಯೊಂದು ಭಾಗದಲ್ಲೂ ದೇಶದ ಸಂವಿಧಾನದ ವರ್ಣಗಳು ಸೇರಿಕೊಂಡಿವೆ’ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಬರೆದಿದ್ದಾರೆ.
“ನಮ್ಮ ಎಲ್ಲರ ಹೋರಾಟ ಮತ್ತು ಅಸ್ತಿತ್ವದ ಸಂಕೇತವಾಗಿ ದೇಶದ ಸಂವಿಧಾನವಿದೆ; ಅದು ನಮ್ಮ ಹೆಮ್ಮೆ, ನಮ್ಮ ತತ್ವವಾಗಿದೆ’ ಎಂದು ರಾಹುಲ್ ಹೇಳಿದ್ದಾರೆ.