Credit card; ಇಷ್ಟದ ನೆಟ್‌ವರ್ಕ್ ಆಯ್ಕೆ ಮಾಡಿ : ಗ್ರಾಹಕರಿಗೇನು ಲಾಭ?
ಬ್ಯಾಂಕ್‌ಗಳಿಗೆ ಆರ್‌ಬಿಐ ಹೊಸ ಮಾರ್ಗಸೂಚಿ
Team Udayavani, Mar 8, 2024, 6:00 AM IST
ಹೊಸದಿಲ್ಲಿ: ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಶೀಘ್ರ ತಮ್ಮಿಷ್ಟದ ನೆಟ್‌ವರ್ಕ್ ಆಯ್ಕೆ ಅವಕಾಶ ದೊರೆಯಲಿದೆ. ಈ ಕುರಿತಾಗಿ ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್‌ಗಳು, ಕಾರ್ಡ್ ನೀಡುವ ಬ್ಯಾಂಕ್‌ಗಳು, ಬ್ಯಾಂಕೇತರ ವಿತ್ತೀಯ ಸಂಸ್ಥೆಗಳಿಗೆ (ಎನ್‌ಬಿಎಫ್ಸಿ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವ ಮೊದಲು ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಹೆಚ್ಚು ನೆಟ್‌ವರ್ಕ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಬ್ಯಾಂಕ್ ಹಾಗೂ ಬ್ಯಾಂಕೇತರ ಸಂಸ್ಥೆಗಳು ನೀಡ ಬೇಕಾಗುತ್ತದೆ. ಈಗಾಗಲೇ ಬಳಕೆ ಮಾಡುತ್ತಿರುವ ಗ್ರಾಹಕರೂ ಕಾರ್ಡ್ ನವೀಕರಣದ ಸಂದರ್ಭದಲ್ಲಿ ತಮ್ಮಿ ಷ್ಟದ ನೆಟ್‌ವರ್ಕ್‌ಗೆ ಬದಲಾಯಿಸುವ ಅವಕಾಶವನ್ನು ಇದು ಒದಗಿಸಲಿದೆ.
ವೀಸಾ, ಮಾಸ್ಟರ್‌ಕಾರ್ಡ್, ಅಮೆರಿಕನ್ ಎಕ್ಸ್‌ಪ್ರೆಸ್, ಡೈನರ್ಸ್ ಕ್ಲಬ್ ಮತ್ತು ರುಪೆ ಸದ್ಯ ದೇಶದಲ್ಲಿರುವ 5 ಕಾರ್ಡ್ ನೆಟ್‌ವರ್ಕ್ ವ್ಯವಸ್ಥೆಗಳು. ಅವು ಬ್ಯಾಂಕ್ ಹಾಗೂ ಗ್ರಾಹಕರ ನಡು ವಿನ ಕೊಂಡಿಯಾಗಿ ಕೆಲಸಮಾಡುತ್ತವೆ.
ಗ್ರಾಹಕರಿಗೇನು ಲಾಭ?
ಸೇವಾಶುಲ್ಕ ಆಧರಿಸಿ ಗ್ರಾಹಕರು ಇಷ್ಟದ ನೆಟ್‌ವರ್ಕ್ ಆಯ್ದುಕೊಳ್ಳಬಹುದು
ಬ್ಯಾಂಕ್‌ಗಳು ಒಪ್ಪಂದ ಮಾಡಿಕೊಂಡಿರುವ ನೆಟ್‌ವರ್ಕ್‌ಗೆ ಹೆಚ್ಚಿನ ಶುಲ್ಕ ಪಾವತಿಯಿಂದ ಮುಕ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ