ಹೋಂ ವರ್ಕ್ ಮಾಡಲಿಲ್ಲ ಎಂದು ಮಗಳ ಕೈ ಕಾಲು ಕಟ್ಟಿ ಸುಡು ಬಿಸಿಲಲ್ಲಿ ಮಲಗಿಸಿದ ತಾಯಿ!
Team Udayavani, Jun 8, 2022, 11:05 PM IST
ನವದೆಹಲಿ : 8 ವರ್ಷದ ಮಗಳು ಶಾಲೆಯಲ್ಲಿ ಕೊಟ್ಟಿದ್ದ ಹೋಂ ವರ್ಕ್ನ್ನು ಮಾಡಲಿಲ್ಲ ಎನ್ನುವ ಕಾರಣಕ್ಕೆ ತಾಯಿ, ಆ ಮಗಳ ಕೈ ಕಾಲು ಕಟ್ಟಿ, ಟೆರೇಸ್ನಲ್ಲಿ ಮಲಗಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಸುಡುವ ಬಿಸಿಲಲ್ಲಿ ಬಾಲಕಿ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ವಿಡಿಯೋ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆ ಬಾಲಕಿ ಮತ್ತವಳ ಕುಟುಂಬವನ್ನು ಪತ್ತೆ ಹಚ್ಚಿದ್ದಾರೆ. “ಹೋಂ ವರ್ಕ್ ಮಾಡಿಲ್ಲವೆಂದು 6-7 ನಿಮಿಷ ಅವಳನ್ನು ಮನೆ ಮೇಲೆ ಮಲಗಿಸಿದ್ದೆ. ಆಮೇಲೆ ಕೆಳಗೆ ಕರೆತಂದೆ’ ಎಂದು ಆಕೆಯ ತಾಯಿ ಹೇಳಿದ್ದಾಳೆ. ಈ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.