ಮಹಿಳೆಯ ಶವ ಢಾಬಾದಲ್ಲಿ ಫ್ರೀಜರ್ ನಲ್ಲಿ ಪತ್ತೆ; ಮಾಲಿಕನ ಸೆರೆ
Team Udayavani, Feb 14, 2023, 6:39 PM IST
ಹೊಸದಿಲ್ಲಿ: ನೈಋತ್ಯ ದಿಲ್ಲಿಯ ನಜಫ್ ಗಢದ ಢಾಬಾವೊಂದರಲ್ಲಿ 25 ವರ್ಷದ ಮಹಿಳೆಯ ಶವ ಇಂದು ಫ್ರೀಜರ್ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು-ಮೂರು ದಿನಗಳ ಹಿಂದೆ ಮಹಿಳೆಯನ್ನು ಕೊಂದು ಆಕೆಯ ಶವವನ್ನು ಢಾಬಾದ ಫ್ರೀಜರ್ ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಢಾಬಾ ಮಾಲೀಕ ಸಾಹಿಲ್ ಗಹ್ಲೋಟ್ ನನ್ನು ಬಂಧಿಸಲಾಗಿದೆ. ಮಹಿಳೆ ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಢಾಬಾ ಮಾಲೀಕ ಸಾಹಿಲ್ ಗಹ್ಲೋಟ್ ಅವರನ್ನು ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಟಾಟಾ ಗ್ರೂಪ್ ನಿಂದ ಬೃಹತ್ ಒಪ್ಪಂದ; ಏರ್ ಬಸ್ ನಿಂದ 250 ವಿಮಾನಗಳ ಖರೀದಿ
ಗಹ್ಲೋಟ್ ಮತ್ತು ಮಹಿಳೆ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿ ವಿಕ್ರಮ್ ಸಿಂಗ್ ಹೇಳಿದ್ದಾರೆ.
“ಗಹ್ಲೋಟ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಬೇಕಾಗಿತ್ತು. ಅವನ ಗೆಳತಿ ಈ ವಿಷಯ ತಿಳಿದಾಗ, ಅವರ ನಡುವೆ ಜಗಳವಾಗಿದೆ, ಅಲ್ಲದೆ ಆಕೆ ಅವಳನ್ನು ಮದುವೆಯಾಗುವಂತೆ ಸಾಹಿಲ್ ನನ್ನು ಒತ್ತಾಯಿಸಿದ್ದಳು. ಇದರಿಂದ ಕೋಪಗೊಂಡ ಗಹ್ಲೋಟ್ ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರೀಜರ್ ನಲ್ಲಿ ಬಚ್ಚಿಟ್ಟಿದ್ದ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.