ಮೋದಿ ಜತೆ ಡಿನ್ನರ್ ಮಾಡುವಾಸೆ
Team Udayavani, Jun 2, 2019, 6:00 AM IST
ಮುಂಬಯಿ: ಬಾಲಿವುಡ್ ನಟಿ ಕತ್ರಿನಾ ಕೈಫ್, ಯಾರಿಗಾದರೂ ತಮ್ಮ ಜತೆಗೆ ಡಿನ್ನರ್ಗೆ ಬರುವಂತೆ ಆಫರ್ ಕೊಟ್ಟರೆ ಯಾರು ಬೇಡ ಅಂತಾರೆ ಹೇಳಿ? ಇಂಥ ಆಫರ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕರೆ?!
ಅಚ್ಚರಿಯಾದರೂ ಇದು ಸತ್ಯ. ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ರಾತ್ರಿಯೂಟ ಮಾಡುವ ಬಯಕೆಯನ್ನು ಕತ್ರೀನಾ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಅಂದಹಾಗೆ, ಜಗತ್ತಿನ ಮೂವರು ಪ್ರಮುಖ ವ್ಯಕ್ತಿಗಳೊಂದಿಗೆ ಡಿನ್ನರ್ ಮಾಡುವ ಆಸೆಯಿದೆ ಎಂದು ಕತ್ರಿನಾ ಹೇಳಿಕೊಂಡಿದ್ದಾರೆ. ಅವರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರಾದರೆ, ಮತ್ತಿಬ್ಬರು ಅಮೆರಿಕದ ಹಿರಿಯ ನಟಿ ಮರ್ಲಿನ್ ಮಾನ್ರೊ ಹಾಗೂ ಅಮೆರಿಕದ ರಾಜತಂತ್ರಜ್ಞೆ, ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ ಕಾಂಡೊಲಿನಾ ರೈಸ್ ಆಗಿದ್ದಾರೆ.