ಬಜೆಟಲ್ಲಿ ವಿದೇಶಿ, ಖಾಸಗಿ ಹೂಡಿಕೆಗೆ ಒತ್ತು
Team Udayavani, Dec 13, 2017, 10:15 AM IST
ಹೊಸದಿಲ್ಲಿ: ಮೂಲ ಸೌಕರ್ಯ ಕ್ಷೇತ್ರ ದಲ್ಲಿ ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡುವುದಕ್ಕೆ ಒತ್ತು ನೀಡಲಾಗುತ್ತದೆ. ಈ ಬಗ್ಗೆ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಕೆಲ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಹೀಗೆಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ಹೇಳಿದ್ದಾರೆ. ಈ ಮೂಲಕ ಮೂಲ ಸೌಕರ್ಯ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ. ಕ್ರೆಡಿಟ್ ರೇಟಿಂಗ್ ಸಂಸ್ಥೆ ಕ್ರೈಸಿಲ್ ಸಲ್ಲಿಸಿದ್ದ ವರದಿ ಪ್ರಕಾರ 5 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರವೇ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಕ್ಷೇತ್ರ ವಾಗಲಿದೆ ಎಂದಿದೆ. ಹೀಗಾಗಿ ಇಂಥ ಕ್ರಮ ಅನಿವಾರ್ಯ ಎಂದಿದ್ದಾರೆ.