Udayavni Special

ಶ್ರಮಿಕರ ಸಬಲೀಕರಣ


Team Udayavani, May 15, 2020, 7:54 AM IST

shramikaru-

ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಬುಧವಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಗುರುವಾರ ರೈತರು, ಶ್ರಮಿಕರ ಸರ್ವಾಂಗೀಣ ಅಭಿವೃದ್ಧಿಗಾಗಿ  ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕೆಳ ಮಧ್ಯಮ ವರ್ಗದ ಜನರಿಗಾಗಿ ಹೊಸ ಸೌಲಭ್ಯಗಳನ್ನು ಘೋಷಿಸಿದ್ದಾರೆ. ಮುದ್ರಾ ಯೋಜನೆಯ ಸಾಲಗಾರರಿಗೆ ನೆರವಿನ ಹಸ್ತ ಚಾಚಲಾಗಿದೆ. ಸ್ವ-ಸಹಾಯ ಗುಂಪುಗಳನ್ನು ಮತ್ತಷ್ಟು ರಚಿಸಿ  ಬಡವರ ಏಳಿಗೆಗೆ ಅನುಕೂಲ ಕಲ್ಪಿಸಲಾಗಿದೆ. ಆ ಮೂಲಕ, ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ದೇಶದ ಜನಜೀವನ ಮಟ್ಟವನ್ನು ಕೆಳ ಹಂತದಿಂದ ಸರಿಪಡಿಸುವ ಕೈಂಕರ್ಯಕ್ಕೆ ಕೈ ಹಾಕಲಾಗಿದೆ.

ಒಂದು ದೇಶ, ಒಂದೇ ಪಡಿತರ ಕಾರ್ಡ್‌: ಇನ್ನು ಮುಂದೆ ನೀವು ದೇಶದ ಯಾವ ಮೂಲೆಯಲ್ಲಿದ್ದರೂ, ನಿಮ್ಮಲ್ಲಿರುವ ಪಡಿತರ ಕಾರ್ಡ್‌ ಮೂಲಕ ಆ ಪ್ರದೇಶದ ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಪಡಿತರ ಪಡೆಯಬಹುದು.  ಅಂದರೆ, ನಿಮ್ಮ ಪಡಿತರ ಕಾರ್ಡ್‌ ಗೆ ದೇಶದ ಎಲ್ಲ ರಾಜ್ಯಗಳಲ್ಲೂ ಮಾನ್ಯತೆ ಇರುತ್ತದೆ. ಇದಕ್ಕೆ ಸಂಬಂಧಿಸಿ ಒಂದು ದೇಶ, ಒಂದು ಪಡಿತರ ಕಾರ್ಡ್‌ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಮಾರ್ಚ್‌ 2021ರಿಂದ ಪೂರ್ಣವಾಗಿ  ಜಾರಿಯಾಗಲಿದೆ. ಒಂದು ದೇಶ, ಒಂದು ರೇಷನ್‌ ಕಾರ್ಡ್‌ ಎನ್ನುವುದು ಆಧಾರ್‌ ಲಿಂಕ್‌ ಆಗಿರುವ ಡಿಜಿಟಲೀಕೃತ ಕಾರ್ಡ್‌ ಆಗಿದೆ. ಇದರಲ್ಲಿ ಕುಟುಂಬದ ಎಲ್ಲರ ಆಧಾರ ಸಂಖ್ಯೆ ನಮೂದಾಗಿರುತ್ತದೆ. ಹೀಗಾಗಿ, ವಲಸಿಗ ಒಂದು  ಗರದಲ್ಲಿದ್ದು, ಆತನ ಕುಟುಂಬ ಮತ್ತೂಂದು ನಗರದಲ್ಲಿದ್ದರೆ, ತಾವಿರುವ ಪ್ರದೇಶದಿಂದಲೇ ತಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟು ಪಡಿತರವನ್ನು ಕಾರ್ಮಿಕ ಹಾಗೂ ಆತನ ಕುಟುಂಬ ಪಡೆಯಬಹುದು.

ಕಾರ್ಮಿಕರಿಗೆ ನೆರವು: ವಿವಿಧ ಕಂಪನಿಗಳ ಪರವಾಗಿ ಕೆಲಸ ಮಾಡುವವರಿಗಾಗಿ (ಗಿಗ್‌ ವರ್ಕರ್ಸ್‌) ಸಾಮಾಜಿಕ ಭದ್ರತೆ ಯೋಜನೆ ಜಾರಿ ಮಾಡಲಾಗುತ್ತದೆ. ಕೆಲಸದಿಂದ ಕಿತ್ತು ಹಾಕಲ್ಪಟ್ಟ ಉದ್ಯೋಗಿಗಳ ಕೌಶಲ್ಯವೃದ್ಧಿಗೆ ನಿಧಿ ಸ್ಥಾಪನೆ  ಮಾಡಲಾಗುತ್ತದೆ. ಮಹಿಳೆಯರಿಗೆ ಎಲ್ಲರೀತಿಯ ಕೆಲಸ ಮಾಡಲು ಅನುಮತಿಯಿದೆ. ಅವರು ರಾತ್ರಿ ಪಾಳಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ಕೆಲಸ ಮಾಡಬಹುದು. ಅಸಂಘಟಿತ ಕೆಲಸಗಾರರಿಗೆ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆಯ  ಉದ್ದೇಶವಿದೆ. ನಿಗದಿತ ಅವಧಿಯ ಉದ್ಯೋಗಿಗಳಿಗೂ ಗ್ರಾಚ್ಯುಟಿ ಸೌಲಭ್ಯ ನೀಡಲಾಗುತ್ತದೆ (ಹಿಂದಿನಂತೆ 5 ವರ್ಷ ಕೆಲಸ ಮಾಡಿದರೆ ಮಾತ್ರ ಗ್ರ್ಯಾಚ್ಯುಟಿ ಎನ್ನುವ ಬದಲು 1 ವರ್ಷ ಪೂರೈಸಿದರೂ ಸೌಲಭ್ಯ ಸಿಗುತ್ತದೆ).

ರೈತರಿಗೆ ಹೆಚ್ಚುವರಿ ಅನುಕೂಲ: ಇದೇ ವರ್ಷ ಮಾ. 1ರಿಂದ ಏ. 30ರವರೆಗೆ ಕೃಷಿ ವಲಯದಲ್ಲಿ 86,000 ಕೋಟಿ ರೂ. ಮೊತ್ತದ 63 ಲಕ್ಷ ಸಾಲದ ಅರ್ಜಿಗಳನ್ನು ಅಂಗೀಕಾರ ಮಾಡಲಾ ಗಿದೆ. ಇದೇ ವರ್ಷ ಮಾರ್ಚ್‌ನಲ್ಲಿ ನಬಾರ್ಡ್‌ ವತಿಯಿಂದ 29,500 ಕೋಟಿ ರೂ. ಹಣವನ್ನು ರೀ-ಫೈನಾನ್ಸಿಂಗ್‌ ರೀತಿಯಲ್ಲಿ ಉಪಯೋಗಿಸಲಾ ಗಿದೆ. ರಾಜ್ಯಗಳಿಗೆ ಗ್ರಾಮೀಣಾಭಿವೃದ್ಧಿ ನಿಧಿಯ ರೂಪದಲ್ಲಿ 4,200 ಕೋಟಿ ರೂ. ವಿತರಿಸಲಾಗಿದೆ. ಇದನ್ನು ಗ್ರಾಮೀಣ  ಮೂಲಸೌಕರ್ಯಾಭಿವೃದ್ಧಿಗೆಆಯಾ ರಾಜ್ಯಗಳು ಬಳಸಬಹುದಾಗಿದೆ. ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿನ ಕೃಷಿ ಸಂಸ್ಥೆಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವ ಸಂಬಂಧ 6,700 ಕೋಟಿ ರೂ. ಹಣವನ್ನು  ದೇ ವರ್ಷ ಮಾರ್ಚ್‌ನಲ್ಲಿ “ವರ್ಕಿಂಗ್‌ ಕ್ಯಾಪಿಟಲ್‌’ ಮಾದರಿಯಲ್ಲಿ ಹಂಚಿಕೆ ಮಾಡಲಾಗಿದೆ.

ನಗರದ ಬಡವರಿಗೆ ಸಹಾಯ: ರಾಜ್ಯಗಳ ವಿಪತ್ತು ಪರಿಹಾರ ನಿಧಿಗೆ ಕೇಂದ್ರ ಸರ್ಕಾರ ಕಳುಹಿಸಿರುವ ತಲಾ 11,000 ಕೋಟಿ ರೂ.ಗಳನ್ನು ಕೊರೊನಾದ ಈ ಕಾಲಘಟ್ಟದಲ್ಲಿ ನಗರದಲ್ಲಿನ ಬಡವರ ಸಹಾಯಕ್ಕಾಗಿ ಬಳಸಿಕೊಳ್ಳಲು  ಸೂಚಿಸಲಾಗಿದೆ. 2020ರ ಮಾ. 15ರಿಂದ ನಗರ ಪ್ರದೇಶಗಳಲ್ಲಿ ಹೊಸದಾಗಿ 7,200 ಹೊಸ ಸ್ವ-ಸಹಾಯ ಗುಂಪುಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ವಸತಿ ರಹಿತ ಬಡವರಿಗೆ ದಿನಕ್ಕೆ ಮೂರು ಹೊತ್ತು ಊಟದ  ವ್ಯವಸ್ಥೆ ಕಲ್ಪಿಸಲಾಗಿದೆ. 2020ರ ಏಪ್ರಿಲ್‌ನಿಂದ ಪೈಸಾ ಪೋರ್ಟಲ್‌ ಮೂಲಕ ಸ್ವ-ಸಹಾಯ ಗುಂಪುಗಳಿಗೆ ಕೊಡಬೇಕಾದ ಧನಸಹಾಯವನ್ನು ಸುಲಲಿತಗೊಳಿಸಲಾಗಿದೆ. ದೇಶದ 12,000 ಸ್ವ-ಸಹಾಯ ಗುಂಪುಗಳು 3 ಕೋಟಿ ಮಾಸ್ಕ್  ಹಾಗೂ 1.2 ಲಕ್ಷ ಸ್ಯಾನಿಟೈಸರ್‌ಗಳನ್ನು ತಯಾರಿಸಿದ್ದು, ಈ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

* ದೇಶದ ಎಲ್ಲ ಕಡೆ ಸಮಾನ ಕನಿಷ್ಠ ವೇತನ ಜಾರಿ ಮಾಡಲಾಗುತ್ತದೆ. ಅಸಂಘಟಿತ ವಲಯದವರಿಗೂ ಸೇರಿ ವೇತನವನ್ನು ಸಮಯಕ್ಕೆ ಸರಿಯಾಗಿ ಎಲ್ಲ ಕೂಲಿ ಕಾರ್ಮಿಕರಿಗೂ ನೀಡಬೇಕು. ಸದ್ಯ ಕನಿಷ್ಠ ವೇತನ ವ್ಯಾಪ್ತಿಯಲ್ಲಿ  ಶೇ.30ರಷ್ಟು ಕಾರ್ಮಿಕರು ಮಾತ್ರ ಇದ್ದಾರೆ. ದೇಶದ ಎಲ್ಲ ಕಡೆ ಒಂದೇ ರೀತಿಯ ಕನಿಷ್ಠ ವೇತನದಿಂದ ತಾರತಮ್ಯ ನಿವಾರಣೆಯಾಗುತ್ತದೆ. ಎಲ್ಲ ಕೆಲಸಗಾರರಿಗೂ ನೇಮಕಾತಿ ಪತ್ರ ನೀಡಬೇಕಾಗುತ್ತದೆ. ಇದರಿಂದ ಎಲ್ಲವೂ ದಾಖಲೀಕರಣಗೊಂಡಂತಾಗುತ್ತದೆ. ಇನ್ನು ಉದ್ಯೋಗಿಗಳಿಗೆ ವಾರ್ಷಿಕ  ಆರೋಗ್ಯ ಪರೀಕ್ಷೆ, ಔದ್ಯೋಗಿಕ ಸುರಕ್ಷತೆಯನ್ನು ನೀಡಬೇಕಾಗುತ್ತದೆ. ಕೇವಲ 10 ಮಂದಿಗಿಂತ ಕಡಿಮೆ ಕೆಲಸಗಾರರಿದ್ದರೂ ಇದು ಅನ್ವಯವಾಗುತ್ತದೆ.

* ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಎಲ್ಲ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ತರಲು ಕೇಂದ್ರ ನಿರ್ಧರಿಸಿದೆ. ಇದುವರೆಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಜಿಲ್ಲೆಗಳಲ್ಲಿ ಮಾತ್ರ ಇಎಸ್‌ಐ ಸೌಲಭ್ಯವಿತ್ತು. ಮುಂದೆ ದೇಶದ ಅಷ್ಟೂ ಜಿಲ್ಲೆಗಳಿಗೆ ವಿಸ್ತರಿಸಲ್ಪಡುತ್ತದೆ. ಜೊತೆಗೆ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಕೆಲಸಗಾರರನ್ನು ಹೊಂದಿರುವ ಸಂಸ್ಥೆಗಳಿಗೂ ಸಿಗುತ್ತದೆ. ಹತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಂಸ್ಥೆಗಳಲ್ಲಿ ದುಡಿಯುತ್ತಿದ್ದರೂ ಇಎಸ್‌ಐ ಲಭ್ಯ. ಇನ್ನು  ಸಂಸ್ಥೆಯೊಂದರಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ, ಅಪಾಯ ಕಾರಿಯಾದ ಕೆಲಸ ಮಾಡುತ್ತಿದ್ದರೆ, ಅವರಿಗೂ ಇಎಸ್‌ಐ ಸಿಗುತ್ತದೆ. ಅಂತಾರಾಜ್ಯ ವಲಸೆ ನೌಕರರ ವ್ಯಾಖ್ಯೆಯನ್ನು ಬದಲಿಸಲಾಗಿದೆ. ಉದ್ಯೋಗದಾತನಿಂದ ನೇರವಾಗಿ  ಕೆಲಸ ಪಡೆಯುವವರು, ತಾವಾ ಗಿಯೇ ಅನ್ಯರಾಜ್ಯಕ್ಕೆ ವಲಸೆ ಬರುವವರು, ಗುತ್ತಿಗೆದಾರರಿಂದ ನೇಮಕ ಮಾಡಿಕೊಳ್ಳುವವರನ್ನೂ ವಲಸೆಗಾರರ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳಲು ಈ ಕ್ರಮ.

* ವಲಸೆ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಬಾಡಿಗೆ ಮನೆ ಸಿಕ್ಕುವುದು ಕಷ್ಟ. ಇದನ್ನು ಸರಿಪಡಿಸಲು ಕೇಂದ್ರಸರ್ಕಾರ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕಾರ್ಯಕ್ರಮವೊಂದನ್ನು ಜಾರಿ ಮಾಡಲಿದೆ. ಇದರಿಂದ ವಲಸಿಗರಿಗೆ,  ನಗರದ ಬಡವರಿಗೆ ಸಹಾಯವಾಗಲಿದೆ. ಈ ಪ್ರಕಾರ, ಸರ್ಕಾರಿ ಮನೆಗಳನ್ನು ಪಿಪಿಪಿ ಮಾದರಿಯಲ್ಲಿ, ಕಡಿಮೆ ವೆಚ್ಚದ ಬಾಡಿಗೆ ಮನೆಗಳಾಗಿ ಪರಿವರ್ತಿಸುವುದು, ಖಾಸಗಿಯಾಗಿ ಮನೆ ನಿರ್ಮಾಣ ಮಾಡುವ ಕೈಗಾರಿಕೆಗಳಿಗೆ, ಸಂಸ್ಥೆಗಳಿಗೆ  ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಲು ಪ್ರೇರಣೆ ನೀಡುವುದು, ರಾಜ್ಯ/ಕೇಂದ್ರಸರ್ಕಾರಿ ಸಂಸ್ಥೆಗಳಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಲು ಪ್ರೇರೇಪಿಸುವುದು ಸರ್ಕಾರದ ಯೋಜನೆಗಳಲ್ಲಿ ಸೇರಿದೆ.

* ದೇಶದ ಮೂರು ಕೋಟಿಯಷ್ಟು ಸಣ್ಣ ರೈತರು, ವಲಸಿಗ ರೈತರಿಗೆ ಇಳುವರಿ ನಂತರದ ಹಾಗೂ ಮುಂಗಾರು ಪೂರ್ವ ಬಿತ್ತನೆಯ ಕೃಷಿ ಚಟುವಟಿಕೆಗಳಿಗಾಗಿ ಸಾಲ ನೀಡಲು ಉದ್ದೇಶಿಸಲಾಗಿದೆ. 30,000 ಕೋಟಿ ರೂ. ಮೊತ್ತವನ್ನು ಮೀಸಲಿಡಲಾಗುತ್ತದೆ. ಗ್ರಾಮೀಣ ಬ್ಯಾಂಕುಗಳು, ಗ್ರಾಮೀಣ ಸಹಕಾರಿ ಬ್ಯಾಂಕುಗಳ ವತಿಯಿಂದ ಈ ಸಾಲ ಸೌಲಭ್ಯ ಸಿಗಲಿದೆ. ದೇಶದ 33 ರಾಜ್ಯಗಳ ಸಹಕಾರಿ ಬ್ಯಾಂಕುಗಳು, 351 ಜಿಲ್ಲಾ ಸಹಕಾರಿ ಬ್ಯಾಂಕುಗಳು, 43 ಗ್ರಾಮೀಣ ಬ್ಯಾಂಕುಗಳನ್ನು ಈ ಯೋಜನೆಯಲ್ಲಿ ತೊಡಗಿಸಲಾಗುತ್ತದೆ. ಈ ಸಾಲ ಸೌಲಭ್ಯಕ್ಕಾಗಿ ನಬಾರ್ಡ್‌ನಿಂದ 30,000 ಕೋಟಿ ರೂ.ಗಳನ್ನು ತೊಡಗಿಸಲಾಗುತ್ತದೆ. ಈ ಹಿಂದೆ, ನಬಾರ್ಡ್‌ನಿಂದ ನೀಡಲಾಗಿದ್ದ 90,000 ಕೋಟಿ ರೂ.ಗಳಿಗೆ ಹೆಚ್ಚುವರಿಯಾಗಿ ಈ ಹಣವನ್ನು ನೀಡಲಾಗುತ್ತದೆ.

* ದೇಶದ ಮೂರು ಕೋಟಿ ರೈತರಿಗೆ ನೇರ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 4.22 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗುವುದು. ಸಾಲ ಮರುಪಾವತಿ ಕಂತುಗಳನ್ನು ಮೂರು  ತಿಂಗಳವರೆಗೆ ಮುಂದೂಡುವ  ಸೌಲಭ್ಯವಿರುತ್ತದೆ. ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಹಾಗೂ ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಗೆ ನೀಡಲಾಗುವ ಧನ ಸಹಾಯ ಸೌಲಭ್ಯಗಳ ಮೇಲೆ ಇದ್ದ ಗಡುವನ್ನು 2020ರ ಮಾ. 1ರಿಂದ ಮಾ. 31ರವರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ, 2.5 ಕೋಟಿ ರೈತರಿಗೆ ಹೊಸದಾಗಿ 25 ಲಕ್ಷ ಕಿಸಾನ್‌ ಕಾರ್ಡ್‌ಗಳ ವಿತರಣೆ ಮಾಡಲಾಗುತ್ತ ದೆ. ಇದಕ್ಕಾಗಿ, 2 ಲಕ್ಷ ಕೋಟಿ ರೂ. ಮೀಸಲಿಡಲಾಗುತ್ತದೆ. ಮೀನುಗಾರರಿಗೆ, ಹೈನುಗಾರಿಕೆ ನಡೆಸುವವರೂ ಇದರ  ಲಾಭ ಪಡೆಯಬಹುದಾಗಿದೆ.

* ಕೆಳ ಮಧ್ಯಮ ವರ್ಗದವರ (ವಾರ್ಷಿಕ ಆದಾಯ 6ರಿಂದ 18 ಲಕ್ಷ ರೂ.ವರೆಗೆ)ಮನೆ ಹೊಂದುವ ಕನಸನ್ನು ನನಸು ಮಾಡುವುದಕ್ಕೆ ಕೇಂದ್ರಸರ್ಕಾರ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಹೊಸ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ  ಸಾಲ ಸಂಬಂಧಿತ ಸಬ್ಸಿಡಿ ಯೋಜನೆಯನ್ನು (ಸಿಎಲ್‌ಎಸ್‌ಎಸ್‌) 2017ರಿಂದಲೇ ಜಾರಿ ಮಾಡಿದೆ. ಇದು 2020 ಮಾರ್ಚ್‌ವರೆಗೆ ವಿಸ್ತರಣೆಯಾದ ಪರಿಣಾಮ 3.3 ಲಕ್ಷ ಕುಟುಂಬಗಳು ಲಾಭ ಪಡೆದಿದ್ದವು. ಇದನ್ನು 2021 ಮಾರ್ಚ್‌ವರೆಗೆ ವಿಸ್ತರಿಸಲಾಗುತ್ತದೆ. ಇದು 2.5 ಲಕ್ಷ ಕುಟುಂಬಗಳಿಗೆ ನೆರವು ನೀಡುತ್ತದೆ. ಇದಕ್ಕಾಗಿ 70,000 ಕೋಟಿ ರೂ. ನೀಡಲಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ, ಹತ್ತಾರು ಉತ್ಪನ್ನಗಳಿಗೆ ಬೇಡಿಕೆಯೂ
ಸೃಷ್ಟಿಯಾಗುತ್ತದೆ.

* ಮುದ್ರಾ ಯೋಜನೆಯಡಿ ನೀಡಲಾಗುವ ಶಿಶು ಸಾಲದ ಮೇಲೆ ವಿಧಿಸಲಾಗುತ್ತಿದ್ದ ಬಡ್ಡಿಯಲ್ಲಿ ಶೇ. 2ರಷ್ಟನ್ನು ಕಡಿಮೆ ಮಾಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುದ್ರಾ-ಶಿಶು ಸಾಲ ಯೋಜನೆಯಲ್ಲಿ ಈಗಾಗಲೇ 1.62 ಲಕ್ಷ  ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು, ಈ ಸಾಲಗಳನ್ನು ಪಡೆದ ಎಲ್ಲರಿಗೂ ಅದರ ಮೇಲಿನ ಬಡ್ಡಿಯಲ್ಲಿ ಶೇ. 2ರಷ್ಟು ಕಡಿತ ಉಂಟಾಗಲಿದೆ. ಇದರಿಂದ, ಈ ವಲಯದಲ್ಲಿ ಸಾಲಗಾರರ ಮೇಲೆ ಬೀಳುತ್ತಿದ್ದ ಬಡ್ಡಿಯ  ಹೊರೆಯಲ್ಲಿ 15,000 ಕೋಟಿ ರೂ. ಕಡಿಮೆಯಾಗಲಿದೆ. ಈ ನಿರ್ಧಾರದಿಂದ ಸುಮಾರು 3 ಕೋಟಿ ಜನರಿಗೆ ಅನುಕೂಲವಾಗುತ್ತದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ಈ ಮೂಲಕವೂ ಮಧ್ಯಮ, ಕೆಳ ಮಧ್ಯಮ  ವರ್ಗದವರಿಗೆ ನೆರವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

* ಕ್ಯಾಂಪಾ’ ಯೋಜನೆಯಡಿ (ಕಾಂಪನ್ಸೇಟರಿ ಅಫಾರೆಸ್ಟೇಶನ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಪ್ಲಾನಿಂಗ್‌ ಅಥಾರಿಟಿ ) ಸದ್ಯದಲ್ಲೇ 6,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಉದ್ಯೋಗ ಸೃಷ್ಟಿ ಮಾಡುವುದು ಈ ನಿಧಿಯ ಉದ್ದೇಶ. ರಾಜ್ಯಸರ್ಕಾರಗಳು ಈ ನಿಧಿಯನ್ನು, ವನ ನಿರ್ಮಾಣ, ನಿರ್ವಹಣೆ, ಬೀಜಬಿತ್ತನೆ ಮೂಲಕ ಮತ್ತೆ ವೃಕ್ಷಗಳನ್ನು ಬೆಳೆಸುವುದು (ನಗರ ಪ್ರದೇಶವನ್ನೂ ಸೇರಿ), ಕಾಡಿನ ರಕ್ಷಣೆ, ಕಾಡುಪ್ರಾಣಿಗಳ ನಿರ್ವಹಣೆ, ಹಾಗೆಯೇ ರಕ್ಷಣೆ, ಈ  ಸಂಬಂಧಿ ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಇದರಿಂದ ಉದ್ಯೋಗ ಸೃಷ್ಟಿ ಜೊತೆಗೆ, ಆದಿವಾಸಿಗಳಿಗೂ ಜೀವನೋಪಾಯಕ್ಕೆ ವ್ಯವಸ್ಥೆಯಾದಂತಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿರುವ, ಗಿರಿಜನರಿಗೆ, ಆದಿವಾಸಿಗಳಿಗೆ, ಅರಣ್ಯವನ್ನೇ ನಂಬಿಕೊಂಡಿರುವವರ ಬದುಕಿಗೆ ಈ  ಯೋಜನೆ ಸಂಜೀವಿನಿಯಾಗಲಿದೆ.

* ಲಾಕ್‌ ಡೌನ್‌ನಿಂದಾಗಿ ಅನೇಕ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಮನೆಮನೆಗೆ ತರಕಾರಿ, ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳಿಗೆ ತುಂಬಾ ತೊಂದರೆಗೊಳಗಾಗಿದ್ದರು. ಅವರೆಲ್ಲರಿಗೂ ಈಗ ನೆಮ್ಮದಿ ಹಾಗೂ ಮತ್ತೆ ತಮ್ಮ  ಕಸುಬನ್ನು ಪುನಃ ಆರಂಭ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ಅದಕ್ಕಾಗಿ 5,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೂಲಕ, ದೇಶಾದ್ಯಂತ ಇರುವ ಸುಮಾರು 50 ಲಕ್ಷ ವ್ಯಾಪಾರಿಗಳಿಗೆ ಈ ಮೂಲಕ  ಸಾಲಸೌಲಭ್ಯ ನೀಡಿ ಅವರ ಬದುಕನ್ನು ಹಸನುಗೊಳಿಸಲಾಗುತ್ತದೆ. ಆರಂಭಿಕವಾಗಿ 10,000 ರೂ. ಸಾಲ ನೀಡಲಾಗುತ್ತದೆ. ಅಂತರ್ಜಾಲದ ಮೂಲಕ ಪಾವತಿ ಮಾಡಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೆಯೇ ಸಾಲ  ಮರು ಮರುಪಾವತಿಯನ್ನು ಸರಿಯಾಗಿ ಮಾಡಿದರೆ, ಹೆಚ್ಚಿನ ಸಾಲ ನೀಡಲಾಗುತ್ತದೆ.

ಟಾಪ್ ನ್ಯೂಸ್

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

Untitled-1

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಟ ರಾಜ್ ದೀಪ ನಾಯ್ಕ್

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

suicide

ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.