ಪಾಕ್ ಶೆಲ್ ದಾಳಿಗೆ ಐವರು ಸಾವು
Team Udayavani, Mar 20, 2018, 6:00 AM IST
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಛ…ನ ಬಾಲ್ಕೋಟ್ನಲ್ಲಿ ಪಾಕಿಸ್ತಾನ ಸೈನಿಕರು ಭಾನುವಾರ ನಡೆಸಿದ ಶೆಲ್ ದಾಳಿಯಲ್ಲಿ ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ. ಎಲ್ಒಸಿಯಾಚೆಯಿಂದ ಪಾಕ್ ಸೈನಿಕರು ಹಾರಿಸಿದ ಶೆಲ್ ದೇವತಾ ಸರ್ಗ್ಲೂನ್ ಎಂಬ ಹಳ್ಳಿಯ ಮನೆಯ ಚಾವಣಿ ಛೇದಿಸಿ ಸ್ಫೋಟಗೊಂಡಿತು. ಇದರಿಂದಾಗಿ ಮೂವರು ಮಕ್ಕಳು, ತಂದೆ-ತಾಯಿ ಅಸುನೀಗಿದ್ದಾರೆ. ಗಾಯಗೊಂಡ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಅವರನ್ನು ಜಮ್ಮುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶಾಂಗ ಇಲಾಖೆ ನವದೆಹಲಿಯಲ್ಲಿ ಪಾಕಿಸ್ತಾನ ಉಪ ಹೈಕಮಿಷನರ್ಗೆ ಪ್ರಬಲ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದೊಂದು ಹೀನ ಕೃತ್ಯ ಎಂದು ಕೇಂದ್ರ ಪ್ರತಿಪಾದಿಸಿದೆ.