Imphal ಯುಎಫ್ಒ: ಏರ್ಪೋರ್ಟ್ ಕಾರ್ಯಾಚರಣೆ ಸ್ಥಗಿತ
Team Udayavani, Nov 19, 2023, 11:41 PM IST
ಇಂಫಾಲ್: ಮಣಿಪುರದ ಇಂಫಾಲ್ನ ವಿಮಾನ ನಿಲ್ದಾಣದ ರನ್ವೇಯಲ್ಲಿ ಯುಎಫ್ಒ (ಅಪರಿಚಿತ ಹಾರುವ ವಸ್ತು)ವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ರವಿವಾರ ಏರ್ಪೋರ್ಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಇದರಿಂದಾಗಿ ಇಂಫಾಲ್ನಿಂದ ತೆರಳಬೇಕಿದ್ದ 3 ವಿಮಾನಗಳ ಸುಮಾರು 500ರಷ್ಟು ಪ್ರಯಾಣಿಕರು ವಿಮಾನ ನಿಲ್ದಾಣ ದಲ್ಲೇ ಉಳಿಯಬೇಕಾಯಿತು.
2 ವಿಮಾನಗಳ ಪಥ ಬದಲಿಸಿ ದರೆ, 3 ವಿಮಾನಗಳ ಸಂಚಾರ ವಿಳಂಬ ಗೊಳಿಸಲಾಯಿತು. ನಿರ್ಬಂಧಿತ ವಲಯದಲ್ಲಿ ಡ್ರೋನ್ನಂತಹ ವಸ್ತುವೊಂದು ಅನು ಮಾನಾ ಸ್ಪದವಾಗಿ ಹಾರುತ್ತಿರು ವುದು ಸಿಐಎಸ್ಎಫ್ ಸಿಬಂದಿಯ ಕಣ್ಣಿಗೆ ಬಿದ್ದಿದ್ದು, ಕೂಡಲೇ ವಿಮಾನಗಳ ಹಾರಾ ಟವನ್ನು ಸ್ಥಗಿತಗೊಳಿ ಸಲಾಯಿತು. 3 ಗಂಟೆಗಳ ಬಳಿಕ ವಾಯುಪಡೆ ತಂಡವು ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ ಬಳಿಕವೇ ಕಾರ್ಯಾಚರಣೆ ಆರಂಭಿಸಲಾಯಿತು.