ಜಮ್ಮು: 400 ಅಡಿ ಆಳದ ಕಮರಿಗೆ ಕಾರು ಬಿದ್ದು ನಾಲ್ವರ ಸಾವು
Team Udayavani, Sep 20, 2017, 4:08 PM IST
ಜಮ್ಮು : ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಾಮಬನ ಪ್ರದೇಶದಲ್ಲಿ ಕಾರೊಂದು ಸ್ಕಿಡ್ ಆಗಿ ಆಳದ ಕಮರಿಗೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ನಾಲ್ವರು ಮೃತ ಪಟ್ಟ ಘಟನೆ ವರದಿಯಾಗಿದೆ.
ಕಾರು ರಾಮಬನದಿಂದ ಶ್ರೀನಗರಕ್ಕೆ ಹೋಗುತ್ತಿತ್ತು. ಮಧ್ಯಾಹ್ನ 2.35ರ ಹೊತ್ತಿಗೆ ಇಲ್ಲಿಂದ ಸುಮಾರು 150 ಕಿ.ಮೀ. ದೂರದ ಕೇಲಾ ಮೋರಾ ಎಂಬಲ್ಲಿನ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 400 ಅಡಿ ಆಳದ ಕಮರಿಗೆ ಉರುಳಿ ಬಿತ್ತು. ಪರಿಣಾವಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು.
ರಕ್ಷಣಾ ಕಾರ್ಯಕರ್ತರು ಶವಗಳನ್ನು ಕಮರಿಯಿಂದ ಮೇಲಕ್ಕೆತ್ತುವಲ್ಲಿ ಸಫಲರಾದರು. ಆದರೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪೊಲೀಸರು ಮೃತರ ಗುರುತನ್ನು ತಿಳಿಯುವ ಯತ್ನ ಮಾಡುತ್ತಿದ್ದಾರೆ.