ಗೋವಾ ಫೆನ್ನಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ!;ಯುಎಸ್ಗೆ ರಫ್ತು
Team Udayavani, Apr 3, 2018, 9:50 AM IST
ಪಣಜಿ: ಔಷ ಧೀಯ ಗುಣವುಳ್ಳ ಜನಪ್ರಿಯ ಗೇರು ಹಣ್ಣಿನ ಮದ್ಯಕ್ಕೆ ಪೇಟಂಟ್ ಲಭಿಸಿ ಅನೇಕ ವರ್ಷವೇ ಕಳೆದಿದೆ. ಅಗತ್ಯಕ್ಕೆ ತಕ್ಕಂತೆ ಪ್ರಚಾರ ಹಾಗೂ ಮಾರುಕಟ್ಟೆ ಲಭಿಸದ ಕಾರಣ ಗೋವಾ ಫೆನ್ನಿಯು ಗೋವಾಕ್ಕೆ ಮಾತ್ರವೇ ಸೀಮಿತವಾಗಿತ್ತು.ಆದರೆ ಇದೀಗ ಗೋವಾ ಫೆನ್ನಿಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿದ್ದು ಅಮೆರಿಕಾಕ್ಕೆ ಕರಾರಿನೊಂದಿಗೆ ರಫ್ತಾಗಲಿದೆ ಎಂದು ಗೋವಾ ಕಲಾ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಗಾವಡೆ ಮಾಹಿತಿ ನೀಡಿದರು. ಪೊಂಡಾದ ಪ್ರಿಯೋಳದಲ್ಲಿ ಗೇರು ಹಣ್ಣಿನ ರಸ ತೆಗೆಯುವ ವ್ಯವಸಾಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೂ.22 ರಂದು ಅಮೆರಿಕಾ ಹಾಗೂ ಗೋವಾದ ಕಲಾ ಮತ್ತು ಸಂಸ್ಕೃತಿ ಖಾತೆ ನಡುವೆ ಈ ಕುರಿತಂತೆ ಕರಾರು ಮಾಡಿಕೊಳ್ಳ ಲಾಗುತ್ತಿದೆ. ಗೋವಾದ ಪಾರಂಪರಿಕ ವ್ಯವಸಾಯ, ಕಲೆ ಮತ್ತು ಸಂಸ್ಕೃತಿ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಮೆರಿಕಾದೊಂದಿಗೆ ಕೈ ಜೋಡಿಸಲಾಗುತ್ತಿದೆ.
ಈ ಮೂಲಕವಾಗಿ ಗೋವಾ ಫೆನ್ನಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭಿಸಲಿದೆ. ಗೇರು ಹಣ್ಣಿನಿಂದ ಫೆನ್ನಿ ತಯಾರಿಸುವುದು ಗೋವಾ ಜನತೆಯ ಒಂದು ಪಾರಂಪರಿಕ ವ್ಯವಸಾಯವಾಗಿದೆ. ಪೂರ್ವಜರು ತನ್ನ ಉದರ ನಿರ್ವಹಣೆಗಾಗಿ ಈ ವ್ಯವಸಾಯ ಮಾಡುತ್ತಿದ್ದರು. ಆದರೆ ಸದ್ಯ ವಿವಿಧ ಸಮಸ್ಯೆಗಳಿಂದ ಈ ವ್ಯವಸಾಯವು ಕುಂಠಿತವಾಗುತ್ತಾ ಬಂದಿದೆ. ಆದರೆ ಇದೀಗ ಗೋವಾ ಫೆನ್ನಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭಿಸಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಗೋವಿಂದ ಗಾವಡೆ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು