ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
Team Udayavani, May 29, 2022, 1:53 PM IST
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಬಾಂಬ್ ಗಳು ಮತ್ತು ಗ್ರೆನೇಡ್‌ಗಳಿದ್ದ ಡ್ರೋನ್ ಒಂದನ್ನು ಸೇನಾಪಡೆಗಳು ಭಾನುವಾರ ಹೊಡೆದುರುಳಿಸಿವೆ.
ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದ್ದು, ಏಳು ಮ್ಯಾಗ್ನೆಟಿಕ್ ಬಾಂಬ್‌ಗಳು, ಅಷ್ಟೇ ಸಂಖ್ಯೆಯ ಗ್ರೆನೇಡ್‌ಗಳು ಪತ್ತೆಯಾಗಿವೆ.
ಕಥುವಾ ಜಿಲ್ಲೆಯ ರಾಜ್‌ಬಾಗ್ ಪಿಎಸ್ ವ್ಯಾಪ್ತಿಯ ಗಡಿ ಭಾಗದಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಡ್ರೋನ್ ಬಿದ್ದ ಸ್ಥಳವನ್ನು ಬಾಂಬ್ ನಿಷ್ಕ್ರಿಯ ತಜ್ಞರು ಪರೀಕ್ಷಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
7 ಬ್ಯಾರೆಲ್ ಗ್ರೆನೇಡ್ ಲಾಂಚರ್ ಅಡಿಯಲ್ಲಿಮತ್ತು 7 ಬಾಂಬ್‌ಗಳನ್ನು ಹೆಕ್ಸಾಕಾಪ್ಟರ್‌ಗೆ ಜೋಡಿಸಲಾದ ಪೇಲೋಡ್‌ನಿಂದ ಬೇರ್ಪಡಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತಷ್ಟು ವಿಶ್ಲೇಷಣೆ ನಡೆಸುತ್ತಿದೆ ಎಂದು ಕಥುವಾ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಪಾಕ್ ಕಡೆಯಿಂದ ಉಗ್ರರು ನಾನಾ ಸಂಚುಗಳನ್ನು ನಡೆಸುತ್ತಿದ್ದು, ಸೇನೆ ಮತ್ತು ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜುಲೈ 8ರವರೆಗೂ ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; NDRF ರವಾನೆ
ಗೋವಾ : ರೈಲ್ವೆ ಹಳಿ ಮೇಲೆ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತ
ಭಾರತದ ಸಂವಿಧಾನ ತುಂಬಾ ಸುಂದರ…ಆದರೆ…ಕೇರಳ ಸಚಿವ ಸಾಜಿ ಹೇಳಿದ್ದೇನು?
ಚೆನ್ನೈ: ಒಟಿಪಿಗಾಗಿ ಜಗಳ- ಪತ್ನಿ, ಮಕ್ಕಳ ಎದುರೇ ಟೆಕ್ಕಿಯನ್ನು ಕೊಂದ ಓಲಾ ಚಾಲಕ
ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ