ಜಿಎಸ್ಟಿ: ಶೇ.70 ಸರಕುಗಳು ಅಗ್ಗ
Team Udayavani, Apr 12, 2017, 6:25 AM IST
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾದಾಗ ಹೆಚ್ಚಿನ ಗೃಹೋಪಯೋಗಿ ವಸ್ತುಗಳು ಶೇ.28ರ ಬದಲಾಗಿ ಶೇ.18ರ ಸ್ಲಾಬ್ಗ ಬರುವ ಕಾರಣ ಬಹುತೇಕ ಸರಕುಗಳ ದರ ಅಗ್ಗವಾಗಲಿದೆ. ಸೌಂದರ್ಯವರ್ಧಕಗಳು, ಶೇವಿಂಗ್ ಕ್ರೀಂ, ಶಾಂಪೂ, ಟೂಥ್ಪೇಸ್ಟ್, ಸೋಪು, ಪ್ಲಾಸ್ಟಿಕ್, ಪೈಂಟ್ ಮತ್ತಿತರ ವಸ್ತುಗಳ ದರದಲ್ಲಿ ಇಳಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಿನ ವ್ಯವಸ್ಥೆಯಲ್ಲಿ ವಸ್ತುಗಳ ಉತ್ಪಾದನೆಗೇ ತೆರಿಗೆ ಹಾಕಲಾಗುತ್ತದೆ. ಹಾಗಾಗಿ, ವಸ್ತುಗಳ ದರ ಏರಿಕೆಯಾಗುತ್ತದೆ. ಜತೆಗೆ, ತೆರಿಗೆ ವಿಧಿಸಲಾಗುವುದರಿಂದ ದರ ಹೆಚ್ಚಾಗುತ್ತಾ ಸಾಗುತ್ತದೆ. ಆದರೆ, ಜಿಎಸ್ಟಿ ಜಾರಿಯಾದರೆ, ಉಳಿದೆಲ್ಲ ಪರೋಕ್ಷ ತೆರಿಗೆಗಳು ರದ್ದಾಗುವ ಕಾರಣ, ಒಂದೇ ತೆರಿಗೆ ಅನ್ವಯವಾಗಿ ಸಹಜವಾಗಿಯೇ ವಸ್ತುಗಳ ದರ ಇಳಿಯುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ತಂಬಾಕು ಉತ್ಪನ್ನಗಳ ಮೇಲೆ ಶೇ.28 ತೆರಿಗೆ?
ಜಿಎಸ್ಟಿ ಜಾರಿಗೆ ಕೇಂದ್ರ ಉತ್ಸುಕವಾ ಗಿರುವ ನಡುವೆಯೇ, ತಂಬಾಕು ಉತ್ಪನ್ನಗಳ ಅತಿಯಾದ ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅವುಗಳಿಗೆ ಶೇ.28ರಷ್ಟು ತೆರಿಗೆ ವಿಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಮನವಿ ಮಾಡಿದೆ. ಬೀಡಿ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಶೇ.28 ತೆರಿಗೆ ಹಾಗೂ ಅತ್ಯಧಿಕ ಸೆಸ್ ಹಾಕಬೇಕು. ಆ ಮೂಲಕ ಇಂಥ ಉತ್ಪನ್ನಗಳ ಸುಲಭವಾದ ಲಭ್ಯತೆಗೆ ಬ್ರೇಕ್ ಹಾಕಬೇಕು ಎಂದು ಸಚಿವಾಲಯ ಕೋರಿಕೊಂಡಿದೆ. ಜತೆಗೆ, ಹೆಚ್ಚಿನ ತೆರಿಗೆ ಯಿಂದ ವಿನಾಯಿತಿಯ ವ್ಯಾಪ್ತಿಗೆ ಬೀಡಿ ಉತ್ಪಾದನೆಯಂಥ ಕಡಿಮೆ ವಹಿವಾಟಿನ ಕೈಗಾರಿಕೆಗಳನ್ನು ಸೇರಿಸಬೇಡಿ ಎಂದೂ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!