
1.43 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ
Team Udayavani, Sep 2, 2022, 7:40 AM IST

ಹೊಸದಿಲ್ಲಿ: ಕೊರೊನಾ ಕೇಸುಗಳು ಇಳಿಕೆಯಾದ ಮೇಲೆ ಆರ್ಥಿಕತೆ ಚೇತರಿಕೆಯ ಹಳಿಗೆ ಬರುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಸತತ ಆರನೇ ಬಾರಿಗೆ 1.43 ಲಕ್ಷ ಕೋಟಿ ರೂ. ಮೀರಿ ಜಿಎಸ್‌ಟಿ ಸಂಗ್ರಹವಾಗಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 28ರಷ್ಟು ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ವಸ್ತುಗಳ ದರ ಏರಿಕೆ ಮತ್ತು ಹಬ್ಬದ ಖರೀದಿಯಿಂದಾಗಿ ಈ ಮಟ್ಟದ ಏರಿಕೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದು ಆರ್ಥಿಕ ಚೇತರಿಕೆಯ ಲಕ್ಷಣಗಳಾಗಿವೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.
1.43 ಲಕ್ಷ ಕೋಟಿಯಲ್ಲಿ 24,710 ಕೋಟಿ ಸಿಜಿಎಸ್‌ಟಿ, 30,951 ಎಸ್‌ಜಿಎಸ್‌ಟಿ, 77,782 ಕೋಟಿ ರೂ. ಐಜಿಎಸ್‌ಟಿ ಸೇರಿದೆ. ಈ ಐಜಿಎಸ್‌ಟಿಯಲ್ಲಿ 42,067 ಕೋಟಿ ರೂ. ವಸ್ತುಗಳ ಆಮದುವಿನಿಂದ, 10,168 ಕೋಟಿ ಸೆಸ್‌ನಿಂದ ಬಂದಿದೆ.
ಈ ಮಧ್ಯೆ ಆಗಸ್ಟ್‌ನಲ್ಲಿ ಕರ್ನಾಟಕವೂ ಜಿಎಸ್‌ಟಿ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದೆ. ಇಲ್ಲಿ ಶೇ. 29ರಷ್ಟು ಏರಿಕೆಯಾಗಿದೆ. ಮಿಜೋರಾಂನಲ್ಲಿ ಶೇ. 78 ಮತ್ತು ಗೋವಾದಲ್ಲಿ ಶೇ. 32ರಷ್ಟು ಏರಿಕೆಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಡಾಖ್ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಮಹಾದಾಯಿ ವಿವಾದ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾದ ಯೂನಿರ್ವಸಿಟಿಗಳ ವಿದ್ಯುತ್ ಸರಬರಾಜು ಸ್ಥಗಿತ…

ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ರಾಹುಲ್ 3,000 ಕಿ.ಮೀ. ನಡೆಯಬೇಕಾಯಿತು!
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
