ಐವರು ಸಾಲಗಾರರ ಕಿರುಕುಳ ತಾಳಲಾರದೆ ದಂಪತಿ ಆತ್ಮಹತ್ಯೆ
Team Udayavani, Jun 16, 2018, 3:10 PM IST
ನಾಶಿಕ್ : ತಮಗೆ ಸಾಲ ನೀಡಿದ್ದ ಐವರಿಂದ ಕಿರುಕುಳಕ್ಕೆ ಗುರಿಯಾಗಿ ಬೇಸತ್ತ ದಂಪತಿ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಂಬಾಡ್ ಪ್ರದೇಶದಲ್ಲಿ ನಡೆದಿದೆ.
ಮೃತ ದಂಪತಿಯನ್ನು ವಾಸುದೇವ ಅಂಬಾದಾಸ್ ಜಾಧವ್ (38) ಮತ್ತು ಆತನ ಪತ್ನಿ ಸಂಗೀತಾ (34) ಎಂದು ಗುರುತಿಸಲಾಗಿದೆ. “ನಾವು ಸಾಲ ಪಡೆದುಕೊಂಡ ಐವರು ನಮಗೆ ಕೊಡುತ್ತಿದ್ದ ಕಿರುಕುಳವನ್ನು ತಾಳಲಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಬರಹ ಇರುವ ಡೆತ್ ನೋಟ್ ಮೃತ ದೇಹಗಳ ಸಮೀಪ ದೊರಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ದಂಪತಿ ಮೂಲತಃ ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರದವರೆಂದು ಪೊಲೀಸರು ತಿಳಿಸಿದ್ದಾರೆ.