ಸಾಂವಿಧಾನಿಕ, ಸಂಸದೀಯ ಮಾರ್ಗದ ಮೂಲಕ ಹಿಂದೂ ರಾಷ್ಟ್ರ

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಒಮ್ಮತದ ಅಭಿಪ್ರಾಯ

Team Udayavani, Jun 17, 2022, 7:13 PM IST

1-dfdsf

ಪಣಜಿ: ಸಾಂವಿಧಾನಿಕ ಮತ್ತು ಸಂಸದೀಯ ಮಾರ್ಗದ ಮೂಲಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಹುದು ಎಂಬುದರ ಬಗ್ಗೆ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.

ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರುಚಾರುದತ್ತ ಪಿಂಗಳೆ, ಉತ್ತಮ ಕಾನೂನು ಪ್ರಸ್ತಾಪಗಳನ್ನು ಮಾಡಿ ನಾವು ಕೇಂದ್ರ ಸರಕಾರಕ್ಕೆ ನೀಡುತ್ತೇವೆ. ಜೊತೆಗೆ ನೇಪಾಳವನ್ನೂ ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನಾಗಿಸಲು ಅಧಿವೇಶನದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಸರ್ವಾನುಮತದಿಂದ ಬೆಂಬಲಿಸಿವೆ. ಹಿಂದುತ್ವನಿಷ್ಠರ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಭಾರತದ 26 ರಾಜ್ಯಗಳ ಸಹಿತ ಅಮೆರಿಕಾ, ಹಾಂಗಕಾಂಗ್, ನೇಪಾಳ, ಫಿಜಿ ಮತ್ತು ಇಂಗ್ಲೆಂಡ್ ನ 177 ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು, ಎಂದರು.

ಹೇಗೆ ಜನಪ್ರತಿನಿಧಿಗಳ ಸಂಸತ್ತು ಇರುತ್ತದೆಯೋ, ಆ ರೀತಿಯ ಧರ್ಮಹಿತದ ಕುರಿತು ಚರ್ಚಿಸಲು ಧರ್ಮಪ್ರತಿನಿಧಿಗಳ ಹಿಂದೂ ರಾಷ್ಟ್ರ ಸಂಸತ್ತು ಮೂರು ದಿನಗಳ ಕಾಲ ಈ ಅಧಿವೇಶನದಲ್ಲಿ ಮಾಡಲಾಗಿತ್ತು. ಈ ಸಂಸತ್ತಿನಲ್ಲಿ ಅಂಗೀಕರಿಸಿದ ಪ್ರಸ್ತಾಪನೆಗಳನ್ನು ಜನಪ್ರತಿನಿಧಿಗಳಿಗೆ ಕಳುಹಿಸಲಾಗುವುದು. ಅದರ ಆಧಾರದಲ್ಲಿ ಭಾರತೀಯ ಸಂಸತ್ತಿನಲ್ಲಿ ಚರ್ಚೆಗಳು ನಡೆಯಬಹುದು,  ಭಾರತೀಯ ಸಂಸ್ಕೃತಿ ಗನುಸಾರ ಕಾನೂನು ರಚನೆಯಾಗಬೇಕು, ಗುರುಕುಲ ಶಿಕ್ಷಣ ಮಂಡಲ ಸ್ಥಾಪಿಸಬೇಕು, ದೇವಸ್ಥಾನದ ಅರ್ಚಕರಿಗೆ ಮತ್ತು ವೇದಪಾಠಶಾಲೆಗಳಿಗೆ ಆರ್ಥಿಕ ನೆರವು ನೀಡಬೇಕು, ಜಾಗತಿಕ ಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಅದೇ ರೀತಿ ಶ್ರೀಮದ್ ಭಗವದ್ಗೀತೆಗೆ ರಾಷ್ಟ್ರೀಯ ಗ್ರಂಥ ಎಂದು ಮಾನ್ಯತೆ ನೀಡಬೇಕು ಎಂದು ಹೇಳಿದರು.

ಈ ವೇಳೆ ತೆಲಂಗಾಣದ ಅಭ್ಯಾಸಕ ಶ್ರೀಮತಿ ಎಸ್ಥರ ಧನರಾಜ ಇವರು ಮಾತನಾಡುತ್ತಾ, ಕ್ರೈಸ್ತ ಮಿಶನರಿಗಳು 250 ವರ್ಷಗಳ ಕಾಲ ಇನ್ಕ್ವಿಸಿಶನ್ ನ ಹೆಸರಿನಲ್ಲಿ ಗೋಮಾಂತಕಿಯರ ಮೇಲೆ ನಡೆಸುತ್ತಿರುವ ಅಮಾನವೀಯ ಹಾಗೂ ಕ್ರೂರ ದೌರ್ಜನ್ಯದ ಕುರಿತು ಕ್ರೈಸ್ತ ಸಂಸ್ಥೆಯ ಮುಖ್ಯಸ್ಥರಾದ ಪೋಪ್ ಅವರು ಗೋಮಾಂತಕೀಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಮತಾಂತರದ ಆಧಾರದಲ್ಲಿ ರಾಷ್ಟ್ರೀಯತೆಯನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಮತಾಂತರವನ್ನು ರಾಷ್ಟ್ರಮಟ್ಟದಲ್ಲಿ ನಿಷೇಧಿಸಬೇಕು ಎಂದು ಹೇಳಿದರು.

ಗೋವಾದ ಗೋಮಾಂತಕ ಹಿಂದೂ ಪ್ರತಿಷ್ಠಾನದ ಅಧ್ಯಕ್ಷ   ಅಂಕಿತ ಸಾಳಗಾವಕರ್ ಇವರು ಮಾತನಾಡುತ್ತಾ, ಕಳೆದ ಕೆಲವು ವರ್ಷಗಳಲ್ಲಿ, ಗೋವಾದ ಶಿವೋಲಿಯಲ್ಲಿ ಬಿಲೀವರ್ಸ್ ಪಂಥದ ಪರವಾಗಿ ಪಾಸ್ಟರ್ ಡೊಮಿನಿಕ್ ಅಂಡ ಜೋ ಮಿನಿಸ್ಟ್ರೀಯು ಬೃಹತ್ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಿದೆ. ರೋಗ ಗುಣಪಡಿಸುವ ಹೆಸರಿನಲ್ಲಿ 15 ರೂಪಾಯಿಯ ಎಣ್ಣೆಯನ್ನು 100 ರಿಂದ 150 ರೂಪಾಯಿಗೆ ಮಾರಾಟ ಮಾಡಿ ಸಂತ್ರಸ್ತರನ್ನು ವಂಚಿಸಿದ್ದಾರೆ. ಅದೇ ಪಾಸ್ಟರ ಸ್ವತಃ ಕಾಯಿಲೆಗೆ ಒಳಗಾದಾಗ ಹಿಲಿಂಗ್ ಎಣ್ಣೆಯನ್ನು ಬಳಸದೆ ಆಸ್ಪತ್ರೆಗೆ ಸೇರಿಸಲಾಯಿತು. ಇದು ಅವರ ಬಲೆಯಲ್ಲಿ ಸಿಲುಕಿದ್ದ ಮುಗ್ಧ ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು. ಮತಾಂತರದ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದೆ. ಪಾಸ್ಟರ ಡೊಮಿನಿಕ್ ಅವರ ಆಸ್ತಿಯನ್ನು ಇಡಿ ಮೂಲಕ ತನಿಖೆ ಮಾಡಬೇಕು ಎಂದು ನಾವು ಗೋವಾ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಹಲಾಲ್ ಜಿಹಾದ್ ಪುಸ್ತಕ ಲೇಖಕ ಮತ್ತು ಅಭ್ಯಾಸಕರಾದ ರಮೆಶ್ ಶಿಂದೆ ಮಾತನಾಡಿ, ಮುಸ್ಲಿಮರಿಗೆ ಹಲಾಲ್ ಕಡ್ಡಾಯವಾಗಿದೆಯೇ ಹೊರತು ಇತರ ಧರ್ಮ ಪಂಥಗಳಿಗೆ ಅಲ್ಲ. ಆದರೂ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳ ಮೇಲೆ ಹಲಾಲ್ ಪ್ರಮಾಣೀಕೃತ ಮಾಂಸ ಮತ್ತು ಉತ್ಪನ್ನಗಳನ್ನು ಹೇರುವುದು ಇದು ಭಾರತೀಯ ಸಂವಿಧಾನದಲ್ಲಿ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಗ್ರಾಹಕ ಹಕ್ಕುಗಳಿಗೆ ವಿರುದ್ಧವಾಗಿದೆ. ಆದ್ಧರಿಂದ ಶೇ 100 ರಷ್ಟು ಹಲಾಲ್ ಪ್ರಮಾಣೀಕರಿಸಿದ ಆಹಾರ ಮಾರಾಟ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳಾದ ಮ್ಯಾಕ್ ಡೊನಾಲ್ಡ್ , ಕೆ.ಎಫ್.ಸಿ ಇವುಗಳ ವಿರುದ್ಧ ಮೊಕದ್ಧಮೆ ಹೂಡಬೇಕು. ಹಲಾಲ್ ಅರ್ಥವ್ಯವಸ್ಥೆಯನ್ನು ವಿರೋಧಿಸಲು ಪ್ರತಿ ಜಿಲ್ಲೆಯ ಮಟ್ಟದಲ್ಲಿ ಹಲಾಲ್ ವಿರೋಧಿ ಕ್ರಿಯಾ ಸಮಿತಿಗಳನ್ನು ರಚಿಸಲಾಗುತ್ತಿದೆ. ಇದರಿಂದ ಹಲಾಲ್ ಅರ್ಥವ್ಯವಸ್ಥೆಯ ವಿರುದ್ಧ ಆಂದೋಲನ ನಡೆಸಲು ಯೋಜಿಸಲಾಗಿದೆ. ಅಲ್ಲದೆ ಸಮೀತಿ ಪ್ರಕಟಿಸಿರುವ ಹಲಾಲ್ ಜಿಹಾದ್ ಪುಸ್ತಕವನ್ನು ಹೆಚ್ಚು ಜನ ಓದಬೇಕು ಎಂದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹಂಸ ಮಾತನಾಡಿ, ಯಾವ ಆಕ್ರಮಣಕಾರಿಯೊಂದಿಗೆ ನಾವು ಹೋರಾಡಿ ಭಾರತದಿಂದ ಹೊರಹಾಕಿದ್ದೆವೊ ಅವರ ಹೆಸರುಗಳನ್ನು ಭಾರತದ ನಗರಗಳಿಗೆ ಏಕೆ ಇಡಬೇಕು? ಇದಕ್ಕಾಗಿ ನಾವು ಕೇಂದ್ರ ಸರ್ಕಾರದ ಬಳಿ ಕೇಂದ್ರೀಯ ನಾಮಕರಣ ಆಯೋಗವನ್ನು ಸ್ಥಾಪಿಸುವುದರ ಮೂಲಕ ದೇಶಾದ್ಯಂತ ಇರುವ ಪಟ್ಟಣಗಳು,ವಾಸ್ತುಗಳು, ರಸ್ತೆಗಳು, ಸಂಗ್ರಹಾಲಯಗಳು, ಇತ್ಯಾದಿಗಳಲ್ಲಿ ವಿದೇಶಿ ಆಕ್ರಮಣಕಾರರ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದೇವೆ. ಅದರಂತೆ ಗೋವಾ ನಗರಕ್ಕೆ ಇಟ್ಟಿರುವ ವಾಸ್ಕೊ-ಡ-ಗಾಮಾ ಈ ವಿದೇಶಿ ಆಕ್ರಮಣಕಾರರ ಹೆಸರನ್ನು ಬದಲಾಯಿಸಿ ಗೋಮಂತಕೀಯರ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಸಂಭಾಜಿ ಮಹಾರಾಜರ “ಸಂಭಾಜಿನಗರ” ಎಂದು ಹೆಸರಿಡಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.