ಥಾಣೆಯಲ್ಲಿ ಹಿಸ್ಟರಿ ಶೀಟರ್ ಕೊಲೆ; ಕತ್ತು ಸೀಳಲ್ಪಟ್ಟ ಶವ ಪತ್ತೆ
Team Udayavani, Mar 2, 2018, 12:06 PM IST
ಥಾಣೆ : ಹಲವಾರು ಕ್ರಿಮಿನಲ್ ಆರೋಪಗಳನ್ನು ಹೊತ್ತಿದ್ದ 23ರ ಹರೆಯದ ಬಬ್ಲೂ ಚೌರಾಶಿಯಾ ಎಂಬಾತ ಕೊಲೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಬ್ಲೂ ಮೃತ ದೇಹ ನಿನ್ನೆ ಗುರುವಾರ ರಾತ್ರಿ 9 ಗಂಟೆಗೆ ಉಲ್ಲಾಸನಗರ ಪಟ್ಟಣದಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದವು; ಆತನ ಕತ್ತನ್ನು ಸೀಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಬ್ಲೂ ಚೌರಾಶಿಯಾ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಮುಂತಾದ ಕ್ರಿಮಿನಲ್ ಕೇಸುಗಳು ಇದ್ದವು.
ಬಬ್ಲೂ ಕೊಲೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.