ಐಸಿಸ್ ನಂಟಿನ ಪ್ರಕರಣಗಳಲ್ಲಿ ಮೊದಲ ಶಿಕ್ಷೆ: ಇಬ್ಬರಿಗೆ 7 ವರ್ಷ ಜೈಲು
Team Udayavani, Apr 21, 2017, 3:58 PM IST
ಹೊಸದಿಲ್ಲಿ : ಐಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ವಿಶೇಷ ನ್ಯಾಯಾಯಲಯವು ಐಸಿಸ್ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸಿದ ಮತ್ತು ಯುವಕರ ನೇಮಕಾತಿಯಲ್ಲಿ ತೊಡಗಿಕೊಂಡ ಅಪರಾಧಕ್ಕಾಗಿ ಐಸಿಸ್ ಜತೆ ನಂಟು ಹೊಂದಿದ್ದ ಇಬ್ಬರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ
ಜಿಲ್ಲಾ ನ್ಯಾಯಾಧೀಶ ಅಮರ್ ನಾಥ್ ಅವರು ಆರೋಪಿಗಳಾದ, ಜಮ್ಮು ಕಾಶ್ಮೀರದ ಅಜರ್ ಉಲ್ ಇಸ್ಲಾಮ್ (24) ಮತ್ತು ಮಹಾರಾಷ್ಟ್ರದ ಮೊಹಮ್ಮದ್ ಫರಾನ್ ಶೇಖ್ (24) ಎಂಬವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು.
ಅಪರಾಧಿಗಳು ವಕೀಲ ಎಂ ಎಸ್ ಖಾನ್ ಮೂಲಕ, “ನಮ್ಮ ಕೃತ್ಯಗಳಿಗೆ ನಾವು ಪಶ್ಚಾತ್ತಾಪ ಪಡುತ್ತೇವೆ. ನಮ್ಮ ವಿರುದ್ಧ ಯಾವುದೇ ಪೂರ್ವ ಕ್ರಿಮಿನಲ್ ದಾಖಲೆಗಳು ಇರುವುದಿಲ್ಲ; ನಾವು ಸಮಾಜದ ಮುಖ್ಯವಾಹಿನಿಯನ್ನು ಸೇರಬಯಸುತ್ತೇವೆ ಮತ್ತು ಸಮಾಜಕ್ಕೆ ನಾವು ಉತ್ಪಾದಕ ಶಕ್ತಿಯಾಗಿ ಕೆಲಸ ಮಾಡಲು ಬಯಸುತ್ತೇವೆ; ಅಂತೆಯೇ ನಮ್ಮ ಪುನರ್ ವಸತಿಯನ್ನು ನಾವು ಕೋರುತ್ತೇವೆ’ ಎಂದು ಯೂಟರ್ನ್ ಮಾಡಿದ್ದರು.
ಈ ಇಬ್ಬರು ಆರೋಪಿಗಳ ಜತೆಗೆ ಅದ್‌ನಾನ್ ಹಸನ್ ಎಂಬ ಮತ್ತೋರ್ವ ಆರೋಪಿಯನ್ನು ಕೂಡ ಎನ್‌ಐಎ ಕಳೆದ ವರ್ಷ ಜನವರಿ 28ರಂದು ಬಂಧಿಸಿತ್ತು. ಅದ್‌ನಾನ್ ಹಸನ್ ವಿರುದ್ಧದ ವಿಚಾರಣೆ ಈಗಲೂ ಜಾರಿಯಲ್ಲಿದೆ.
ತನಿಖಾ ಸಂಸ್ಥೆಯ ಪ್ರಕಾರ ಹಸನ್ ಮತ್ತು ಶೇಖ್ 2008 ಮತ್ತು 2012ರಲ್ಲಿ ಯುಎಇಗೆ ತಮ್ಮ ಉದ್ಯೋಗ ಸಂಬಂಧವಾಗಿ ಆಗೀಗ ಎಂಬಂತೆ ಹೋಗಿಬರುತ್ತಲೇ ಇದ್ದರು. 2015ರ ಜುಲೈ ತಿಂಗಳಲ್ಲಿ ಇಸ್ಲಾಮ್ ಇವರನ್ನು ಯುಎಯಲ್ಲಿ ಸೇರಿಕೊಳ್ಳಲಿದ್ದ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !