ಭೀಕರ ರಸ್ತೆ ಅಪಘಾತ: ಭಾರತದ ಖ್ಯಾತ ಯೂಟ್ಯೂಬರ್ ಸಾವು
ಪ್ರಚಾರದ ಅಂಗವಾಗಿ ಆಯೋಜಿಸಿದ ಬೈಕ್ ಯಾತ್ರೆಯಲ್ಲಿ ಸೆ.21 ರಂದು ಖಜುರಾಹೊದಿಂದ ಹೊರಟಿದ್ದರು.
Team Udayavani, Sep 29, 2022, 6:44 PM IST
ನವದೆಹಲಿ: ತನ್ನ ಗೇಮಿಂಗ್ ವಿಡಿಯೋಗಳಿಂದ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿದ್ದ ಖ್ಯಾತ ಯೂಟ್ಯೂಬರ್, ಸ್ಕೈ ಲಾರ್ಡ್ ಎಂದೇ ಜನಪ್ರಿಯರಾಗಿದ್ದ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಸಾವಿಗೀಡದ್ದಾರೆ ಎಂದು ವರದಿಯಾಗಿದೆ.
ಅಭ್ಯುದಯ್ ಮಿಶ್ರಾ ಪಬ್ ಜಿಯಂತಿರುವ ಫ್ರೀ ಫೈಯರ್ ಗೇಮಿಂಗ್ ಕುರಿತು ಹಲವಾರು ವಿಡಿಯೋಗಳನ್ನು ಆಪ್ಲೋಡ್ ಮಾಡುತ್ತಿದ್ದರು, ಅವರ ವಿಡಿಯೋಗಳು ಮಿಲಿಯನ್ ಗಟ್ಟಲೇ ವೀಕ್ಷಣೆ ಆಗುತ್ತಿತ್ತು. ಯೂಟ್ಯೂಬ್ ನಲ್ಲಿ 1.64 ಮಿಲಿಯನ್ ಸಬ್ ಸ್ಕ್ರೈಬರ್ಸ್ ನ್ನು ಅವರು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲೂ ಅವರಿಗೆ 4.24 ಲಕ್ಷ ಫಾಲೋವರ್ಸ್ ಇದ್ದಾರೆ.
ವರದಿಯ ಪ್ರಕಾರ ಅಭ್ಯುದಯ್ ಮಧ್ಯಪ್ರದೇಶ ಸರ್ಕಾರದ ಪ್ರವಾಸೋದ್ಯಮ ಪ್ರಚಾರದ ಅಂಗವಾಗಿ ಆಯೋಜಿಸಿದ ಬೈಕ್ ಯಾತ್ರೆಯಲ್ಲಿ ಸೆ.21 ರಂದು ಖಜುರಾಹೊದಿಂದ ಹೊರಟಿದ್ದರು.
ಭಾನುವಾರ (ಸೆ.25) ಭೋಪಾಲ್ ನ ಸೋಹಾಗ್ ಪುರದ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗೆ ಟ್ರಕ್ ಢಿಕ್ಕಿಯಾಗಿ ಅಭ್ಯುದಯ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅವರು ಸೆ.26 ( ಸೋಮವಾರ) ಅವರು ಮೃತ ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಅಭ್ಯುದಯ್ ನಿಧನದಿಂದ ಲಕ್ಷಂತರ ಅಭಿಮಾನಿಗಳು ದುಃಖಿತರಾಗಿದ್ದಾರೆ. ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ