ಸುಪ್ರೀಂ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಗೆ ಸಿಜೆಐ ಪ್ರಮಾಣ ವಚನ
Team Udayavani, Apr 27, 2018, 12:09 PM IST
ಹೊಸದಿಲ್ಲಿ : ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರಿಗೆ ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್ ದೀಪಕ್ ಮಿಶ್ರಾ ಅವರಿಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಬೋಧಿಸಿದರು.
ಇಂದು ಮಲ್ಹೋತ್ರ ಅವರು ಉನ್ನತ ನ್ಯಾಯಾಂಗವನ್ನು ತಲುಪಿರುವ ದೇಶದ ಮೊದಲ ಮಹಿಳಾ ವಕೀಲೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇಂದು ಮಲ್ಹೋತ್ರ ಅವರ ಸೇರ್ಪಡೆಯೊಂದಿಗೆ ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 25ಕ್ಕೆ ಏರಿದೆ. ಆದರೆ ಸಿಜೆಐ ಸೇರಿ ಸುಪ್ರೀಂ ಕೋರ್ಟಿನ ಮಂಜೂರಾತಿ ಬಲ 31. ಎಂದರೆ ಆರು ನ್ಯಾಯಾಧೀಶರ ಕೊರತೆ ಇದೆ.
ಸರ್ವೋಚ್ಚ ನ್ಯಾಯಾಲಯದ ಕೋರ್ಟ್ ನಂಬರ್ 1ರಲ್ಲಿ ಇಂದು ಬೆಳಗ್ಗೆ ಸಿಜೆಐ ಅವರು 61ರ ಹರೆಯದ ಮಲ್ಹೋತ್ರ ಅವರಿಗೆ ಪ್ರಮಾಯ ವಚನ ಬೋಧಿಸಿದರು.