ED ಕಾರ್ಯಾಚರಣೆ ಬಿರುಸು; ಪ್ರತ್ಯಕ್ಷವಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ಶಿಬು ಸೊರೇನ್‌ ಪುತ್ರ ವೀರ.... ಅಜಿತ್‌ ಪವಾರ್‌ ಅಥವಾ ನಿತೀಶ್‌ ಕುಮಾರ್‌ ಅಲ್ಲ: ಜೆಎಂಎಂ ಆಕ್ರೋಶ

Team Udayavani, Jan 30, 2024, 5:30 PM IST

1-sdad-s

ಹೊಸದಿಲ್ಲಿ/ರಾಂಚಿ: ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಝಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಗೈರು ಹಾಜರಾಗಿ ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಮಂಗಳವಾರ ಪ್ರತ್ಯಕ್ಷರಾಗಿದ್ದು ರಾಂಚಿಯಲ್ಲಿ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸೊರೇನ್ ಅವರು ಪಕ್ಷದ ಪ್ರಮುಖರೊಂದಿಗೆ ಸಭೆಯೊಂದನ್ನು ನಡೆಸಿ ಮಹತ್ವದ ಮಾತುಕತೆಯನ್ನೂ ನಡೆಸಿ ರಾಜಕೀಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲಿಯಾದರೂ ಬಂಧನವಾದಲ್ಲಿ ಪರ್ಯಾಯ ವ್ಯವಸ್ಥೆಯ ಕುರಿತೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಇ.ಡಿ. ಅಧಿಕಾರಿಗಳು ಹೊಸದಿಲ್ಲಿಯಲ್ಲಿರುವ ಹೇಮಂತ್‌ ಸೊರೇನ್‌ ಅವರ ನಿವಾಸದಲ್ಲಿ ಸೋಮವಾರ ತಡರಾತ್ರಿಯ ವರೆಗೆ ಶೋಧ ನಡೆಸಿ ಎರಡು ಐಷಾರಾಮಿ ಕಾರುಗಳನ್ನು , 36 ಲಕ್ಷ ರೂ. ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಸಿಎಂ ಹೇಮಂತ್ ಸೊರೆನ್ ಅವರ ರಾಂಚಿ ನಿವಾಸದ 100 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಜೆಎಂಎಂ ಆಕ್ರೋಶ
ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”ಜನವರಿ 31 ರಂದು ಇಡಿ ಕರೆ ಮಾಡಿದಾಗ ಯಾರ ಸೂಚನೆಯ ಮೇರೆಗೆ ಇಡಿ ದೆಹಲಿಯಲ್ಲಿರುವ ಹೇಮಂತ್ ಸೊರೇನ್ ಮನೆಗೆ ಹೋಗಿತ್ತು? 36 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರಿಲ್ಲದಾಗ ಯಾರಿಗಾದರೂ ಅವರ ಮನೆಗೆ ಪ್ರವೇಶಿಸಲು ಅಧಿಕಾರವಿದೆಯೇ? ಅವರನ್ನು ಕ್ರಿಮಿನಲ್‌ನಂತೆ ನಡೆಸಿಕೊಳ್ಳಲಾಗುತ್ತಿದೆ. ಹೇಮಂತ್‌ ಸೋರೆನ್‌ ಅವರು ಹಿಮಂತ ಬಿಸ್ವ ಶರ್ಮ, ಅಜಿತ್‌ ಪವಾರ್‌ ಅಥವಾ ನಿತೀಶ್‌ ಕುಮಾರ್‌ ಅಲ್ಲ. ಅವರು ವೀರ ಶಿಬು ಸೊರೇನ್‌ ಅವರ ಪುತ್ರ” ಎಂದು ಕಿಡಿ ಕಾರಿದ್ದಾರೆ.

ಸಿಎಂ ತಮ್ಮ ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗಿದ್ದು, ಕೆಲಸ ಮುಗಿದ ನಂತರ ವಾಪಸ್ ಬರುತ್ತಾರೆ ಎಂದು ನಿನ್ನೆಯೇ ಹೇಳಿದ್ದೆ. ಜೆಪಿ ನೀಡಿದ ಹೇಳಿಕೆಗಳು CrPC 499 ಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ, ಅಂದರೆ ಮಾನನಷ್ಟ, ನಾವು ಶೀಘ್ರದಲ್ಲೇ ಪ್ರಮುಖ ವಿರೋಧ ಪಕ್ಷದ ಅಧ್ಯಕ್ಷ ಮತ್ತು ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

JMM ನಾಯಕ ಮನೋಜ್ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ “ಇವೆಲ್ಲವೂ ಬಹಿರಂಗಪಡಿಸಲಾಗದ ತಂತ್ರಗಳು. ಸರ್ವಾಧಿಕಾರದ ವಿರುದ್ಧ ಹೋರಾಡಲು, ನಾವು ಘನ ಕಾರ್ಯತಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ದಯವಿಟ್ಟು ನಿರೀಕ್ಷಿಸಿ. ಬ್ರಿಜ್ ಭೂಷಣ್ ಸಿಂಗ್ ನಾಪತ್ತೆಯಾಗಿದ್ದ ವೇಳೆ ಬಿಜೆಪಿಯವರು ಎಂದಾದರೂ ದೂರು ದಾಖಲಿಸಿದ್ದರೇ? ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Sri Lanka Series; ಏಕದಿನ ಸರಣಿಗಿಲ್ಲ ಹಾರ್ದಿಕ್; ಕನ್ನಡಿಗ ಪಾಲಾಗುತ್ತಾ ತಂಡದ ನಾಯಕತ್ವ

Sri Lanka Series; ಏಕದಿನ ಸರಣಿಗಿಲ್ಲ ಹಾರ್ದಿಕ್; ಕನ್ನಡಿಗ ಪಾಲಾಗುತ್ತಾ ತಂಡದ ನಾಯಕತ್ವ

8-kota

Kota: ವಿವಿಧೆಡೆ ವ್ಯಾಪಕ ಹಾನಿ; ಧರೆಗುರುಳಿದ ಮನೆಗಳು, ರಸ್ತೆ ಸಂಚಾರ ಸ್ಥಗಿತ

7-madikeri

Madikeri: ಲಾರಿ- ದ್ವಿಚಕ್ರ ವಾಹನ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

4-panaji

Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

Panaji: ಭಾರಿ ಮಳೆಗೆ ಕುಸಿದು ಬಿದ್ದ ಮನೆ… ಮಹಿಳೆಯ ಜೀವ ಉಳಿಸಿದ ಬಿಸ್ಕೆಟ್

Panaji: ಭಾರಿ ಮಳೆಗೆ ಕುಸಿದು ಬಿದ್ದ ಮನೆ… ಮಹಿಳೆಯ ಜೀವ ಉಳಿಸಿದ ಬಿಸ್ಕೆಟ್

Jitan Sahani: ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿ ತಂದೆಯ ಬರ್ಬರ ಹತ್ಯೆ…

Jitan Sahani: ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿ ತಂದೆಯ ಬರ್ಬರ ಹತ್ಯೆ…

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Sri Lanka Series; ಏಕದಿನ ಸರಣಿಗಿಲ್ಲ ಹಾರ್ದಿಕ್; ಕನ್ನಡಿಗ ಪಾಲಾಗುತ್ತಾ ತಂಡದ ನಾಯಕತ್ವ

Sri Lanka Series; ಏಕದಿನ ಸರಣಿಗಿಲ್ಲ ಹಾರ್ದಿಕ್; ಕನ್ನಡಿಗ ಪಾಲಾಗುತ್ತಾ ತಂಡದ ನಾಯಕತ್ವ

8-kota

Kota: ವಿವಿಧೆಡೆ ವ್ಯಾಪಕ ಹಾನಿ; ಧರೆಗುರುಳಿದ ಮನೆಗಳು, ರಸ್ತೆ ಸಂಚಾರ ಸ್ಥಗಿತ

7-madikeri

Madikeri: ಲಾರಿ- ದ್ವಿಚಕ್ರ ವಾಹನ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.