ನ್ಯಾ.ಚಲಮೇಶ್ವರ್ಗೆ ಸುಪ್ರೀಂ ವಿದಾಯ
Team Udayavani, May 19, 2018, 6:00 AM IST
ನವದೆಹಲಿ: ಮುಂದಿನ ತಿಂಗಳ 22ರಂದು ಸೇವಾ ನಿವೃತ್ತಿ ಪಡೆಯಲಿರುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯ ಮೂರ್ತಿ ಜಸ್ತಿ ಚಲಮೇಶ್ವರ್ ಶುಕ್ರವಾರ ಸಿಜೆಐ ದೀಪಕ್ ಮಿಶ್ರಾ ಜತೆ ನ್ಯಾಯಪೀಠ ಹಂಚಿಕೊಂಡಿದ್ದಾರೆ. ಮೇ 20ರಿಂದ ಜುಲೈ 1ರ ವರೆಗೆ ಸುಪ್ರೀಂಕೋರ್ಟ್ ಬೇಸಗೆ ರಜೆ ಇದೆ. ಹೀಗಾಗಿ, ಶುಕ್ರವಾರವೇ ನ್ಯಾ.ಜೆ.ಚಲಮೇಶ್ವರ್ಗೆ ಕೊನೆಯ ಕರ್ತವ್ಯದ ದಿನವಾಗಿತ್ತು.
ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಸಿಜೆಐ ಮಿಶ್ರಾ, ನ್ಯಾ.ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠದಲ್ಲಿ ನ್ಯಾ. ಚಲಮೇಶ್ವರ್ ಕೂಡ ಕುಳಿತಿದ್ದರು. ಸೇವಾ ನಿವೃತ್ತಿ ಪಡೆಯುವ ನ್ಯಾಯಮೂರ್ತಿಗೆ ಕೊನೆಯ ದಿನ ಸಿಜೆಐ ಜತೆಗೆ ಪೀಠ ಹಂಚಿಕೊಳ್ಳುವ ಅವಕಾಶ ನೀಡುವುದನ್ನು ಸುಪ್ರೀಂಕೋರ್ಟ್ ಪಾಲಿಸಿಕೊಂಡು ಬಂದಿದೆ. ಹಿರಿಯ ನ್ಯಾಯವಾದಿಗಳಾದ ರಾಜೀವ್ ದತ್ತಾ, ಪ್ರಶಾಂತ್ ಭೂಷಣ್, ಗೋಪಾಲ ಶಂಕರನಾರಾಯಣನ್ ಅವರು ಈ ವೇಳೆ ನ್ಯಾ.ಚಲಮೇಶ್ವರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಬಳಿಕ ನ್ಯಾ.ಚಲಮೇಶ್ವರ್ ಕೈಮುಗಿದು ಕೋರ್ಟ್ ಹಾಲ್ನಿಂದ ತೆರಳಿದರು.
ಸುಪ್ರೀಂಕೋರ್ಟ್ ಬಾರ್ ಎಸೋಸಿಯೇಶನ್ ನ್ಯಾ.ಚಲಮೇಶ್ವರ್ ಗೌರವಾರ್ಥ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿತ್ತಾದರೂ, ಅವರು ಅದಕ್ಕೆ ಒಪ್ಪಿರಲಿಲ್ಲ. ಅಷ್ಟೇ ಅಲ್ಲ, ಕರ್ತವ್ಯದ ಕೊನೆಯ ದಿನ ಸಿಜೆಐ ದೀಪಕ್ ಮಿಶ್ರಾ ಅವರ ಜೊತೆಯಲ್ಲಿ ಕುಳಿತುಕೊಳ್ಳು ವುದಿಲ್ಲ ಎಂದೂ ಅವರು 3 ದಿನಗಳ ಹಿಂದಷ್ಟೇ ಹೇಳಿದ್ದರು ಎಂದು ವರದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ