ನೀಟ್ ಟಾಪರ್ ಕಲ್ಪನಾ BSEB intermediateನಲ್ಲೂ ಟಾಪರ್
Team Udayavani, Jun 6, 2018, 7:17 PM IST
ಪಟ್ನಾ : 2018ರ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಮೂಡಿಬಂದಿದ್ದ ಬಿಹಾರದ ಕಲ್ಪನಾ ಕುಮಾರಿ ಇದೀಗ ಬಿಹಾರ ರಾಜ್ಯ ಪರೀಕ್ಷಾ ಮಂಡಳಿ ನಡೆಸಿದ 12ನೇ ತರಗತಿಯ ಇಂಟರ್ಮೀಡಿಯಟ್ ಪರೀಕ್ಷೆಯಲ್ಲೂ ಟಾಪರ್ ಆಗಿ ವಿಜೃಂಭಿಸಿದ್ದಾರೆ.
ಇಂದು ಬುಧವಾರ ಬಿಹಾರ ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್ಸೈಟಿನಲ್ಲಿ ಪ್ರಕಟಿಸಲಾಯಿತು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಕಲ್ಪನಾ 434 ಅಂಕಗಳನ್ನು ಪಡೆದು ಟಾಪರ್ ಆಗಿ ಮೂಡಿ ಬಂದರು. ವಿಜ್ಞಾನ ವಿಭಾಗದ ಇನ್ನಿಬ್ಬರು ಟಾಪರ್ಗಳೆಂದರೆ ಅಭಿನವ್ ಮತ್ತು ರುದ್ರೇಶ್ ರಾಜ್ ವರ್ಮಾ.
ಕಾಮರ್ಸ್ ವಿಭಾಗದಲ್ಲಿ ನಿಧಿ ಸಿನ್ಹಾ ಟಾಪರ್ ಆಗಿದ್ದಾರೆ. ಈಕೆಗೂ 434 ಅಂಕ ಲಭಿಸಿದೆ. ಈಕೆ ಮುಜಫರಪುರದ ಆರ್ಡಿಎಸ್ ಕಾಲೇಜಿನ ವಿದ್ಯಾರ್ಥಿನಿ.
ಕಲಾ ವಿಭಾಗದ ಟಾಪರ್ ಆಗಿರುವ ಕುಸುಮ್ ಕುಮಾರಿ ಅವರಿಗೆ 424 ಅಂಕಗಳು ದೊರಕಿವೆ. ಈಕೆ ಜಮೂಯಿ ಯ ಎಸ್ ಎ ವಿದ್ಯಾಲಯದ ವಿದ್ಯಾರ್ಥಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?