ಎಡ-ಬಲ ಅನುರಾಗದ ದಾಂಪತ್ಯ

ಲಡಾಖ್‌ ಯುವ ಸಂಸದ ಸೆರಿಂಗ್‌ ಸಂಸಾರ ಕಥನ

Team Udayavani, Aug 18, 2019, 5:45 AM IST

ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರವನ್ನು ಪ್ರಶಂಸಿಸಿ ಸಂಸತ್ತಿನಲ್ಲಿ ಗಮನ ಸೆಳೆಯುವ ಭಾಷಣ ಮಾಡಿದ್ದ ಲಡಾಖ್‌ನ ಬಿಜೆಪಿ ಸಂಸದ ಸೆರಿಂಗ್‌ ಜಮ್ಯಂಗ್‌ಗೆ ಮನೆಯಲ್ಲೇ ರಾಜಕೀಯ ವಿರೋಧಿ ಇದ್ದಾರೆ! ಬೇರಾರೂ ಅಲ್ಲ; ಅವರ ಪತ್ನಿ ಸೋನಂ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಇಬ್ಬರೂ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಮದುವೆಯಾಗಿ ಆರು ತಿಂಗಳಾಗಿದ್ದು, ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ ತಮ್ಮ ದಾಂಪತ್ಯದ ಸೊಗಸನ್ನು ಕಸಿದಿಲ್ಲ ಎಂದಿದ್ದಾರೆ. ಸೆರಿಂಗ್‌ ಪತ್ನಿ ಸೋನಂ ಜೆಎನ್‌ಯು ವಿದ್ಯಾರ್ಥಿನಿ. ಆಕೆ ಕಮ್ಯೂನಿಸ್ಟ್‌ ವಿಚಾರಧಾರೆಯ ಪ್ರಭಾವ ಹೊಂದಿದ್ದಾರೆ. ಪತಿ ಬಿಜೆಪಿ – ಆರ್‌ಎಸ್‌ಎಸ್‌ ಕಡೆ ನನ್ನನ್ನು ಸೆಳೆಯು ತ್ತಲೇ ಇದ್ದಾರೆ; ನಾನು ಅತ್ತ ವಾಲಿಲ್ಲ ಎಂದು ನಗುತ್ತ ತಿಳಿಸಿದ್ದಾರೆ ಸೋನಂ.

ಕನ್ಹಯ್ಯ ಕುಮಾರ್‌ ಬಗ್ಗೆಯೂ ಮಾಹಿತಿ ಹೊರಗೆಡವಿರುವ ಸೋನಂ, ಕನ್ಹಯ್ಯ ಕುಮಾರ್‌ ಬಂಧನ ತಪ್ಪು. ಏಕೆಂದರೆ ದೇಶದ್ರೋಹದ ಘೋಷಣೆ ಕೂಗುವ ವೇಳೆ ಕನ್ಹಯ್ಯ ಅಲ್ಲಿ ಇರಲೇ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ. ಆಗ ಹೊರಬಿದ್ದ ವಿಡಿಯೋ ಸಂಪೂರ್ಣ ನಕಲಿಯಾಗಿತ್ತು. ನಾನು ಆ ಸ್ಥಳದಲ್ಲೇ ಇದ್ದೆ ಎಂದು ಸೋನಂ ಹೇಳಿದ್ದಾರೆ.

ಇಂಥ ಹತ್ತು ಹಲವಾರು ವಾಗ್ವಾದಗಳನ್ನು ಪತಿಯ ಜತೆಗೆ ನಿತ್ಯವೂ ನಡೆಸುವುದಾಗಿ ಸೋನಂ ಹೇಳಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ