Madhya Pradesh ಕೈಗೆ ಮೃದು ಹಿಂದುತ್ವದ ಸವಾಲು: ಸಫ‌ಲವಾಗುವುದೇ ಕಾರ್ಯತಂತ್ರ?

ಮುಸ್ಲಿಮರನ್ನು ಸೆಳೆಯಲು ಹೊರಟ ಕಾಂಗ್ರೆಸ್‌

Team Udayavani, Oct 22, 2023, 11:21 PM IST

Madhya Pradesh ಕೈಗೆ ಮೃದು ಹಿಂದುತ್ವದ ಸವಾಲು: ಸಫ‌ಲವಾಗುವುದೇ ಕಾರ್ಯತಂತ್ರ?

ಹೊಸದಿಲ್ಲಿ: ಮಧ್ಯಪ್ರದೇಶ ದೇಶದ ಬೃಹತ್‌ ರಾಜ್ಯ. ಈ ರಾಜ್ಯವನ್ನು ಇದುವರೆಗೆ ಕಾಂಗ್ರೆಸ್‌, ಬಿಜೆಪಿಗಳೇ ಆಳಿವೆ. ಮತದಾರ ಕಾಂಗ್ರೆಸ್‌ ಮೇಲೆ ಸಿಟ್ಟಾದರೆ ಬಿಜೆಪಿ, ಬಿಜೆಪಿ ಮೇಲೆ ಸಿಟ್ಟಾದರೆ ಕಾಂಗ್ರೆಸ್‌ ಅಧಿಕಾರುತ್ತದೆ.

ವಸ್ತುಸ್ಥಿತಿಯಲ್ಲಿ ಉತ್ತರಪ್ರದೇಶ, ಬಿಹಾರಗಳಂತೆ ಈ ರಾಜ್ಯದಲ್ಲಿ ಮುಸ್ಲಿಂ ಮತದಾರರು ನಿರ್ಣಾ ಯಕ ಪಾತ್ರವಹಿಸುವುದಿಲ್ಲ. 47 ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಜಾಸ್ತಿಯಿದ್ದರೂ, 22 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದ್ದಾರೆ. ಮುಸ್ಲಿ ಮರು ಇಲ್ಲಿ ಯಾರ ಕೈಹಿಡಿಯುತ್ತಾರೋ ಅವರೇ ಗೆಲ್ಲುತ್ತಾರೆ. ಈ ಬಾರಿ ಈ ಮತಗಳನ್ನು ಸೆಳೆಯುವುದು ಕಾಂಗ್ರೆಸ್‌ ಉದ್ದೇಶ.

2018ರಲ್ಲಿ ಮಾಜಿ ಸಿಎಂ ಕಮಲನಾಥ್‌, ಮುಸ್ಲಿಂ ಮತದಾರರು ತಮ್ಮ ಕೈಹಿಡಿಯಬೇಕೆಂದು ಮನವಿ ಮಾಡಿದ್ದರು. ಅದನ್ನು ಮತದಾರರು ಪುರಸ್ಕರಿಸಿದ್ದು ಫ‌ಲಿತಾಂಶದಲ್ಲಿ ಸ್ಪಷ್ಟವಾಯಿತು. ಕಾಂಗ್ರೆಸ್‌ಗೆ 12 ಸ್ಥಾನಗಳು ಹೆಚ್ಚುವರಿಯಾಗಿ ಬಂದವು. ಆಗ ಕಾಂಗ್ರೆಸ್‌ಗೆ ಸಿಕ್ಕಿದ್ದು 114, ಬಿಜೆಪಿಗೆ 109 ಸ್ಥಾನ ಗಳು. 15 ತಿಂಗಳ ಅನಂತರ ಕಾಂಗ್ರೆಸ್‌ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿತು.

ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಕಾಂಗ್ರೆಸ್‌ ಈ 22 ಕ್ಷೇತ್ರಗಳತ್ತ ದೃಷ್ಟಿ ನೆಟ್ಟಿದೆ. ಬಿಜೆಪಿಯನ್ನು ಮಣಿಸಬೇಕಾದರೆ ಮುಸ್ಲಿಂ ಮತ ದಾರರು ಪೂರ್ಣವಾಗಿ ಕಾಂಗ್ರೆಸನ್ನು ಬೆಂಬಲಿಸ ಬೇಕು. ಆ ನಿಟ್ಟಿನಲ್ಲಿ ಮುಸ್ಲಿಂ ವಿಕಾಸ್‌ ಪರಿಷದ್‌ ಕೆಲಸ ಆರಂಭಿಸಿದೆ. ಇಲ್ಲಿ ಸಮಸ್ಯೆಯಾಗಿರು ವುದೇನೆಂದರೆ ಕಾಂಗ್ರೆಸಿಗರು ಹಿಂದೂ ಮತಗಳನ್ನು ಸೆಳೆಯಲು ಮೃದು ಹಿಂದುತ್ವಕ್ಕೆ ಜಾರಿರು ವುದು. ಒಂದು ವೇಳೆ ಇದು ಮುಸ್ಲಿಮರನ್ನು ಕೆರಳಿಸಿದರೆ, ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಲಿದೆ. ಆದರೆ ಮುಸ್ಲಿಮರಿಗೆ ಮಧ್ಯಪ್ರದೇಶದಲ್ಲಿ ಬೇರೆ ಆಯ್ಕೆಗಳೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ!

ಯೋಧರನ್ನೂ ಪ್ರಚಾರಕರನ್ನಾಗಿ ಬಳಕೆ: ಖರ್ಗೆ ಆಕ್ಷೇಪ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ನಾಗರಿಕ ಸೇವೆಗಳ ಅಧಿಕಾರಿಗಳು ಮತ್ತು ದೇಶದ ಯೋಧರನ್ನು “ರಾಜಕೀಯ ಕಾರ್ಯಕರ್ತ’ರನ್ನಾಗಿ ಮತ್ತು “ಮಾರ್ಕೆಟಿಂಗ್‌ ಏಜೆಂಟ್‌’ಗಳನ್ನಾಗಿ ಬಳಸಿಕೊಳ್ಳು­ತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕಳೆದ 9 ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸಲು ಸರಕಾರದ ಹಿರಿಯ ಅಧಿಕಾರಿಗಳನ್ನು ಪ್ರತೀ ಜಿಲ್ಲೆಗಳಲ್ಲಿ “ರಥ್‌ ಪ್ರಭಾರಿ’ಗಳನ್ನಾಗಿ ನಿಯೋಜನೆ ಮಾಡಲು ಮತ್ತು ವಾರ್ಷಿಕ ರಜೆಯಲ್ಲಿರುವ ಯೋಧರಿಗೆ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ ಕೆಲಸವನ್ನು ವಹಿಸಲು ನಿರ್ಧರಿಸಿರುವ ಕೇಂದ್ರ ಸರಕಾರದ ವಿರುದ್ಧ ಖರ್ಗೆ ಈ ರೀತಿ ಚಾಟಿ ಬೀಸಿದ್ದಾರೆ. ಸರಕಾರದ ಇಡೀ ಆಡಳಿತ ಯಂತ್ರವನ್ನೇ ಬಿಜೆಪಿಯು ತನ್ನ ಏಜೆಂಟ್‌ಗಳಂತೆ ಬಳಸಿಕೊಳ್ಳುತ್ತಿದೆ. ಎಲ್ಲ ಸಂಸ್ಥೆಗಳು, ವಿಭಾಗಗಳು, ಘಟಕಗಳ ಜತೆಗೆ ಯೋಧರನ್ನೂ ಬಿಜೆಪಿಯು “ಪ್ರಚಾರ ಕ್‌’ರಂತೆ ಬಳಸುತ್ತಿರುವುದು ದುರದೃಷ್ಟಕರ ಎಂದು ಖರ್ಗೆ ಹೇಳಿದ್ದಾರೆ. ಜತೆಗೆ ಈ ಕೂಡಲೇ ಸರಕಾರವು ಈ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದಾರೆ.

ಸಿಎಂ ಕೆಸಿಆರ್‌ಗೆ ರಾಜೇಂದರ್‌ ಎದುರಾಳಿ
ಹೈದರಾಬಾದ್‌: ಪಕ್ಷ ಒಪ್ಪಿದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ವಿರುದ್ಧ ಸ್ಪರ್ಧಿಸಲೂ ಸಿದ್ಧ ಎಂದು ಘೋಷಿಸಿದ್ದ ಬಿಜೆಪಿ ಶಾಸಕ ಇಟಾಲ ರಾಜೇಂದರ್‌ ಅವರನ್ನು ಬಿಜೆಪಿ ಈಗ ಕೆಸಿಆರ್‌ ಭದ್ರಕೋಟೆ ಗಜ್ವೇಲ್‌ನಿಂದಲೇ ಕಣಕ್ಕಿಳಿಸಿದೆ.

ರವಿವಾರ ತೆಲಂಗಾಣದಲ್ಲಿ ಬಿಜೆಪಿ 52 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಜೇಂದರ್‌ಗೆ 2 ಕ್ಷೇತ್ರಗಳ ಟಿಕೆಟ್‌ ನೀಡಲಾಗಿದೆ. ಗಜ್ವೇಲ್‌ ಜತೆಗೆ ಹುಜೂರಾ­­ಬಾದ್‌ನಲ್ಲೂ ಸ್ಪರ್ಧಿಸಲಿದ್ದಾರೆ.

ನ.30ರಂದು ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ 3 ಹಾಲಿ ಸಂಸದರಿಗೂ ಬಿಜೆಪಿ ಟಿಕೆಟ್‌ ನೀಡಿದೆ. ಬಂಡಿ ಸಂಜಯ್‌ ಕುಮಾರ್‌ ಅವರು ಕರೀಂನಗರ, ಧರ್ಮಾಪುರಿ ಅರವಿಂದ್‌ ಅವರು ಕೊರಾಟ್ಲಾ ಮತ್ತು ಸೋಯಂ ಬಾಪು ರಾವ್‌ ಅವರು ಬೋತ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಇನ್ನು, ಕೆಸಿಆರ್‌ ಪುತ್ರ, ಆಡಳಿತಾರೂಢ ಭಾರತ್‌ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ ವಿರುದ್ಧ ಸಿರ್ಸಿಲ್ಲಾದಲ್ಲಿ ರಾಣಿ ರುದ್ರಮ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ.

ಅಮಾನತು ರದ್ದು ಮಾಡಿ ಟಿಕೆಟ್‌: ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್‌ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ಅಮಾನತಾಗಿದ್ದ ಗೋಶ­ಮಹಲ್‌ ಶಾಸಕ, ಹಿಂದುತ್ವದ ಫೈರ್‌ಬ್ರಾಂಡ್‌ ನಾಯಕ ಟಿ.ರಾಜಾ ಸಿಂಗ್‌ರಿಗೆ ಬಿಜೆಪಿ ಅದೇ ಕ್ಷೇತ್ರದ ಟಿಕೆಟ್‌ ನೀಡಿದೆ. ಜತೆಗೆ ಅವರ ಅಮಾನತನ್ನು ರದ್ದು ಮಾಡಿದೆ.

ಬಿಜೆಪಿ ದೂರು: ಛತ್ತೀಸ್‌ಗಢದಲ್ಲಿ 83 ಮಂದಿ ಕಾಂಗ್ರೆಸ್‌ ಅಭ್ಯರ್ಥಿ­ಗಳು ತಮ್ಮ ಆಯ್ಕೆಯ 48 ಗಂಟೆಗಳೊಳಗೆ ಕ್ರಿಮಿನಲ್‌ ಪ್ರಕರಣಗಳ ವಿವರಗಳನ್ನು ಚುನಾ­ವಣ ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಬಿಜೆಪಿ ಆರೋ­ಪಿಸಿದೆ. ಜತೆಗೆ ಈ ಕುರಿತು ರಾಯು³ರ ಮುಖ್ಯ ಚುನಾವಣ ಅಧಿಕಾರಿಗೆ ದೂರನ್ನೂ ನೀಡಿದೆ. ಇದೇ ವೇಳೆ ರವಿವಾರ ಕಾಂಗ್ರೆಸ್‌ ಛತ್ತೀಸ್‌ಗಢದಲ್ಲಿ 7 ಅಭ್ಯರ್ಥಿಗಳ ಪಟ್ಟಿ ಹಾಗೂ ರಾಜಸ್ಥಾನದಲ್ಲಿ ಮತ್ತೆ 43 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಮುಂದಿನ ಚುನಾವಣೆಯಲ್ಲಿ ಪಿಡಿಎ ನಿರ್ಣಾಯಕ: ಅಖಿಲೇಶ್
ಪಂಚ ರಾಜ್ಯ ಚುನಾವಣೆ, ಮುಂದಿನ ವರ್ಷದ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ.

ಟ್ವಿಟರ್‌ನಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್‌ ಯಾದವ್‌, “2024ರ ಚುನಾವಣೆಯೇ ಗುರಿ. ನೇತಾಜಿ ಅಮರರಾಗಲಿ. ಪಿಡಿಎ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬನ ಬೆನ್ನಿನ ಮೇಲೆ ಚಿತ್ರಿಸಲಾಗಿರುವ ಪೋಸ್ಟರ್‌ ಅನ್ನು ಅಪ್‌ಲೋಡ್‌ ಮಾಡಿ ಬರೆದುಕೊಂಡಿದ್ದಾರೆ. ವಿಪಕ್ಷಗಳ ಮೈತ್ರಿಕೂಟದ ಹೆಸರು ಐ.ಎನ್‌.ಡಿ.ಐ.ಎ., ಬದಲಾಗಿ ಪಿಡಿಎ ಎಂದು ಅದರಲ್ಲಿ ಬರೆಯಲಾಗಿದೆ. ಪಿಛ…ಡೇ (ಹಿಂದುಳಿದ ವರ್ಗ), ದಲಿತರು, ಅಲ್ಪಸಂಖ್ಯಾಕರು (ಪಿಡಿಎ) ಅಖೀಲೇಶ್‌ ಯಾದವ್‌ ಅವರ ಗೆಲುವನ್ನು ನಿರ್ಧರಿಸಲಿದ್ದಾರೆ. ಅಖಿಲೇಶ್ ಅವರೇ ಬಡವರಿಗೆ ನ್ಯಾಯ ದೊರಕಿಸಿ ಕೊಡಲಿದ್ದಾರೆ ಎಂದು ಆ ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಶನಿವಾರವಷ್ಟೇ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದ ಅಖೀಲೇಶ್‌, “ಅವರು ಹೊಂದಿರುವ ಮತಗಳು ಕೈತಪ್ಪಿ ಹೋಗುತ್ತಿದೆ ಎಂಬ ಭಾವನೆ ಉಂಟಾಗುತ್ತಿರುವಾಗ ಕಾಂಗ್ರೆಸ್‌ನವರಿಗೆ ಜಾತಿ ಗಣತಿ ನೆನಪಾಗುತ್ತದೆ’ ಎಂದು ದೂರಿದ್ದರು.

ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಒಂದಾದ ಮೇಲೆ ಒಂದರಂತೆ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಈವರೆಗೆ ಅವರ ಆಶ್ವಾಸನೆ ಗಳ ಸಂಖ್ಯೆ 22 ಸಾವಿರ ದಾಟಿದೆ. ನದಿಯೇ ಇಲ್ಲದ ಕಡೆ ಸೇತುವೆ ನಿರ್ಮಿಸುವುದಾ­ಗಿಯೂ ಅವರು ಭರವಸೆ ನೀಡಿದ್ದಾರೆ.
-ಕಮಲ್‌ನಾಥ್‌,
ಮಧ್ಯಪ್ರದೇಶ ಮಾಜಿ ಸಿಎಂ

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.