ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷದ ವಜ್ರ!
Team Udayavani, Aug 8, 2020, 7:55 AM IST
ಸಾಂದರ್ಭಿಕ ಚಿತ್ರ
ಭೋಪಾಲ್: ಅದೃಷ್ಟ ಎಂದರೆ ಇದೇ ಇರಬೇಕು. ಮಧ್ಯ ಪ್ರದೇಶದ ಕಾರ್ಮಿಕನೊಬ್ಬ ರಾತ್ರಿ ಬೆಳಗಾಗುವುದರೊಳಗಾಗಿ ಲಕ್ಷಾಧಿಪತಿಯಾಗಿ ಬದಲಾಗಿದ್ದಾನೆ. ಇದಕ್ಕೆ ಕಾರಣ ಗಣಿಯಲ್ಲಿ ಸಿಕ್ಕ 35 ಲಕ್ಷ ರೂ. ಮೌಲ್ಯದ ಮೂರು ವಜ್ರಗಳು! ಹೌದು, ಪನ್ನಾ ಜಿಲ್ಲೆಯ ವಜ್ರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಾಲ್ಗೆ ಗುರುವಾರ 7.5 ಕ್ಯಾರೆಟ್ನ ಮೂರು ವಜ್ರಗಳು ಸಿಕ್ಕಿವೆ. ಈ ವಜ್ರಗಳು 30ರಿಂದ 35 ಲಕ್ಷ ರೂ. ಬೆಲೆಬಾಳುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.