ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್
Team Udayavani, Jan 19, 2022, 9:30 PM IST
ನವದೆಹಲಿ: ಚುನಾಯಿತ ಪ್ರತಿನಿಧಿಗಳನ್ನು ದೀರ್ಘಾವಧಿಗೆ ಅಮಾನತು ಮಾಡಲು ಸಾಧ್ಯವೇ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿರುವ ಅಂಶ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಶಾಸನ ಮಾಡುವ ವ್ಯವಸ್ಥೆಗೆ ಪ್ರಶ್ನಿಸಲಾಗದ ವ್ಯವಸ್ಥೆ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಆರು ತಿಂಗಳಿಗಿಂತ ಹೆಚ್ಚಿನ ಕಾಲ ಶಾಸಕರನ್ನು ಅಮಾನತು ಮಾಡುವುದು ಸೂಕ್ತವಾದ ಕ್ರಮವಲ್ಲ ಮತ್ತು ಅಸಾಂವಿಧಾನಿಕ ಕ್ರಮ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:ಮೆಟ್ರಿಕ್ ನಂತರ : ವಿದ್ಯಾರ್ಥಿನಿಲಯಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ವಿಧಾನಸಭೆಯ ಸಭಾಧ್ಯಕ್ಷರೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮಂಗಳವಾರ ಮುಕ್ತಾಯವಾಗಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಜತೆಗೆ, ಇನ್ನೊಂದು ವಾರದೊಳಗೆ ಈ ಕುರಿತು ಲಿಖಿತ ವಿವರವನ್ನು ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ನ್ಯಾ. ಎ.ಎಂ.ಖಾನ್ವಿಳ್ಕರ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.