ಮಣ್ಣು ಉಳಿಸಲು 30 ಸಾವಿರ ಕಿ.ಮೀ. ಬೈಕ್‌ಯಾತ್ರೆ

ಕೊಯಮತ್ತೂರು: ಈಶ ಫೌಂಡೇಶನ್‌ನಲ್ಲಿ ಶಿವರಾತ್ರಿ

Team Udayavani, Mar 2, 2022, 7:10 AM IST

ಮಣ್ಣು ಉಳಿಸಲು 30 ಸಾವಿರ ಕಿ.ಮೀ. ಬೈಕ್‌ಯಾತ್ರೆ

ಕೊಯಮತ್ತೂರು:  ಮಣ್ಣಿನ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ 30 ಸಾವಿರ ಕಿ.ಮೀ. ಬೈಕ್‌ ಯಾತ್ರೆ ಕೈಗೊಳ್ಳಲಿದ್ದೇನೆ ಎಂದು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಘೋಷಿಸಿದ್ದಾರೆ.

ಹಣೆಯಲ್ಲಿ ಅರ್ಧ ಚಂದ್ರನನ್ನು ನೆಟ್ಟ, ಕೊರಳಲ್ಲಿ ಹಾವನ್ನು ಬಿಟ್ಟ, ತಲೆಯೆತ್ತಿದ ಭಂಗಿಯ ಶಿವನತ್ತ ನೆಟ್ಟ ಲಕ್ಷಾಂತರ ಕಣ್ಣುಗಳು. ಏಕತ್ರವಾಗಿ ಕಲೆತು ಶಿವ ಎನ್ನುವ ಏಕಸೂತ್ರದಿಂದ ಬಂಧಿಸಲ್ಪಟ್ಟು ಒಂದೇ ಮನಸಿನಿಂದ ಶಿವಧ್ಯಾನ ನಿರತರಾದವರು. ಝಗಮಗದ ದೀಪದ ಬೆಳಕಿನಲ್ಲಿ ಸೇರಿದ್ದ ಜನರಿಗೆ ಹುರುಪು, ಉತ್ಸಾಹ ಮೂಡಿಸಿ ಶಿವಧ್ಯಾನದ ನೆನಪು ಹುಟ್ಟಿಸಿದ ಕ್ಷಣ. ಧ್ಯಾನ ಎಂದರೆ ಮೌನವಲ್ಲ. ಅಮೂರ್ತ ಕ್ಷಣವಲ್ಲ. ಸದ್ಗುರುಗಳೇ ಹೆಜ್ಜೆ ಹಾಕಿ, ಹಾಡಿ ಇತರರಿಗೆ ಕುಣಿದು, ಕುಪ್ಪಳಿಸಿ ಮೈಮರೆಯಲು ಪ್ರೋತ್ಸಾಹ ನೀಡುತ್ತಾ ಜಾಗರದ ಜಾಗೃತಿ ಮೂಡಿಸಿದ ಘಳಿಗೆ.

ಮಂಗಳವಾರ ರಾತ್ರಿ ಕೊಯ ಮತ್ತೂರಿನ ಆದಿಯೋಗಿ ತಾಣದಲ್ಲಿ ನಡೆದ ಶಿವರಾತ್ರಿ ಜಾಗರಣೆಗೆ ಚಾಲನೆ ಸಿಕ್ಕಿದ್ದು ಹೀಗೆ. ಭಾರತದ ಎಲ್ಲೆಡೆಯಿಂದ ಆಗಮಿಸಿದ ಲಕ್ಷಾಂತರ ಮಂದಿಗೆ ವಿದೇಶೀಯರೂ ಜತೆಯಾಗಲು ಕಾರಣವಾದದ್ದು ಶಿವರಾತ್ರಿ.

ಮಣ್ಣು ಉಳಿಸಿ
ಭೂಮಿ ಮತ್ತು ಸೂರ್ಯನ ಬೆಳಕಿನ ಸಂಬಂಧ ವಿಶಿಷ್ಟವಾದುದು. ಸಮಸ್ತ ಜೀವಜಂತುಗಳಿಗೆ ಸ್ವಾಮಿಯಾದ ಶಿವ ಎಲ್ಲ ದೇವರಿಗಿಂತ ಭೂಮಿಗೆ ಹತ್ತಿರನಾಗಿದ್ದಾನೆ. ಈಗಿನ ಜನತೆ ತಮ್ಮ ಅಜ್ಞಾನದಿಂದ, ನಿರ್ಲಕ್ಷ್ಯದಿಂದ ಭೂಮಿಯನ್ನು ಹಾಳುಗೆಡವುತ್ತಿದೆ. ಭೂಮಿ-ಮಣ್ಣು ಉಳಿಸುವುದೇ ಶಿವರಾತ್ರಿಯ ಸಂಕಲ್ಪವಾಗಬೇಕು ಎಂದು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.

ಧ್ಯಾನಲಿಂಗದಲ್ಲಿ ಪಂಚ ಭೂತ ಆರಾಧನೆಯೊಂದಿಗೆ ಪ್ರಾರಂಭವಾದ ಶಿವರಾತ್ರಿಯ ಆಚರಣೆಯಲ್ಲಿ ಲಿಂಗ ಭೈರವಿ ಮಹಾ ಯಾತ್ರೆ ನಡೆದು ಮಹಾ ಆರತಿ ಬೆಳಗಲಾಯಿತು. ಸದ್ಗುರು ಶಿವಲಿಂಗಕ್ಕೆ ಅಭಿಷೇಕ ಮಾಡಿ ದೀಪ ಬೆಳಗಿ ಶುಭಾಶಂಸನೆಗೈದರು. ಅದಾದ ಬಳಿಕ ಮೊದಲು ಮೊಳಗಿದ್ದೇ ಕನ್ನಡ ಹಾಡು. “ಶಿವ ಶಿವ ಎಂದೊಮ್ಮೆ ಪೂಜಿಸು ಮನವೆ’ ಎಂದು ಸೌಂvÕ… ಆಫ್‌ ಈಶ ಬಳಗ ಹಾಡಿ ಅನಂತರ ಹಿಂದಿ ಮತ್ತಿತರ ಹಾಡುಗಳು ಮುಂದುವರಿದವು.

ಪ್ರಸಿದ್ಧರ ಗಾನಗೀತ
ವಿಶಾಲ ವೇದಿಕೆಯಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಸಮ್ಮೇಳನ ಭಜಕರನ್ನು ಹುಚ್ಚೆಬ್ಬಿಸಿ ಕುಣಿಸಿತು. ಪಾಪೊನ್‌ನಿಂದ ಜನಪ್ರಿಯರಾದ ಅಸ್ಸಾಂನ ಅಂಗರಾಗ್‌ ಮಹಾಂತ, ಬಾಲಿವುಡ್‌ ಭಕ್ತಿ ಗಾಯಕ ಮತ್ತು ಹಿನ್ನೆಲೆ ಗಾಯಕರಾದ, ಪಂಜಾಬಿ ಮತ್ತು ಸೂಫಿ ಸಂಗೀತದ ಮಾಸ್ಟರ್‌ ಸಲೀಂ, “ಡಮರು ವಾಲೆ ಬಾಬಾ’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಹಾಡಿನ ಹಂಸರಾಜ್‌ ರಘುವಂಶಿ, ರಾಬರ್ಟ್‌ ಸಿನೆಮಾದ “ಕಣ್ಣೇ ಎದಿರಂದಿ’ ಹಾಡಿನ ಗಾಯಕಿ ಆಂಧ್ರದ ಮಂಗ್ಲಿ ಎಂದು ಜನಪ್ರಿಯರಾಗಿರುವ ಸತ್ಯವತಿ ರಾಥೋಡ್‌, ತಮಿಳಿನ ಶಾನ್‌ ರೋಲ್ಡನ್‌ ಎಂದು ಜನಪ್ರಿಯರಾದ ರಾಘವೇಂದ್ರ ರಾಜಾ ರಾವ್‌ ಅವರ ಹಾಡುಗಳು ಸಂಗೀತಲೋಕದ ಕಡೆಗೆ ಧ್ಯಾನಸ್ಥರ ಮನಸ್ಸನ್ನು ಕೊಂಡೊಯ್ದವು. ಕರ್ನಾಟಕ, ಹಿಂದೂಸ್ಥಾನಿ, ಜನಪದ, ಸಿನೆಮಾ ಶೈಲಿ ಜನಮನರಂಜಿಸಿತು.

ಭಾವಪರವಶ
“ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಹುಟ್ಟಿ ನಾಳೆ ಅಳಿಯುವ ನಾವು ಮಣ್ಣನ್ನು ನಾಶ ಮಾಡುತ್ತಿದ್ದೇವೆ. ಈಗಾಗಲೇ ಮಣ್ಣಿನಲ್ಲಿ ಇರುವ ಶೇ. 40 ಕಡಿಮೆ ಆಹಾರ  ಬೆಳೆಯುತ್ತಿದ್ದು, ಎಂಟು ತಿಂಗಳಿಂದ ಮಣ್ಣು ಉಳಿಸುವ ಸಲುವಾಗಿ ಅಭಿಯಾನ ನಡೆದಿದೆ. ಪ್ರಪಂಚದ ಎಲ್ಲ ದೇಶಗಳ, 730 ರಾಜಕೀಯ ಪಕ್ಷಗಳ ಬೆಂಬಲ ಕೇಳಲಾಗಿದೆ. ಮಾ. 21ಕ್ಕೆ ಲಂಡನ್‌ನಿಂದ, ಒಬ್ಬನೇ ಬೈಕ್‌ನಲ್ಲಿ ಕಾವೇರಿ ಉಳಿಸಲು 30 ಸಾವಿರ ಕಿ.ಮೀ. 100 ದಿನ, 27 ದೇಶಗಳ ಯಾತ್ರೆ ನಡೆಸಿದಂತೆ ಮಣ್ಣು ಉಳಿಸಲು  ಅಭಿಯಾನ ಕೈಗೊಳ್ಳಲಿದ್ದೇನೆ. ಪ್ರತಿದಿನ 10 ನಿಮಿಷ ಮಣ್ಣು ಉಳಿಸಲು ಜಾಲತಾಣದಲ್ಲಿ ಜಾಗೃತಿ ಮೂಡಿಸಿ’ ಎಂದು ಹೇಳಿ ಕೈಮುಗಿದ ಸದ್ಗುರುಗಳಿಗೆ ಭಾವಪರವಶರಾಗಿ ಕೆಲವು ಕ್ಷಣ ಮಾತು ಮುಂದುವರಿಸಲು ಸಾಧ್ಯ ಆಗಲೇ ಇಲ್ಲ.

ರುದ್ರಾಕ್ಷ ದೀಕ್ಷೆ
ಶಿವರಾತ್ರಿಗೆ ಆನ್‌ಲೈನ್‌ ಅಥವಾ ವೈಯಕ್ತಿಕವಾಗಿ ಸೇರಿದ ಜನರಿಗೆ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ರುದ್ರಾಕ್ಷವನ್ನು ಸ್ವೀಕರಿಸಲು ಅವಕಾಶ ನೀಡಲಾಗಿತ್ತು. ವಿಶೇಷವಾಗಿ ಪ್ರತಿಷ್ಠಾಪಿಸಲಾದ 5 ದಶಲಕ್ಷಕ್ಕಿಂತಲೂ ಹೆಚ್ಚು ರುದ್ರಾಕ್ಷ ಮಣಿಗಳನ್ನು ದೇಶಾದ್ಯಂತ ಉಚಿತವಾಗಿ ವಿತರಿಸಲು ಸಿದ್ಧಪಡಿಸಲಾಗಿತ್ತು.

ಏಳು ದಿನಗಳು
ಈ ವರ್ಷ ಮಹಾ ಶಿವರಾತ್ರಿಯು ವಿಶೇಷವಾಗಿದೆ. ಮೊದಲ ಬಾರಿಗೆ, ಮಾ. 1ರ ರಾತ್ರಿ ಸಂಭ್ರಮಾಚರಣೆಯು, ಏಳು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಜೃಂಭಣೆಯಾಗಿ ಮಾ. 8ರಂದು ಕೊನೆಗೊಳ್ಳುತ್ತವೆ.

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.