ರಾಜಸ್ಥಾನ ಕೋಟ : ರೈಲಿನಡಿ ಬಿದ್ದು ಕುಡುಕನ ಸಾವು
Team Udayavani, Oct 29, 2018, 5:48 PM IST
ಕೋಟಾ, ರಾಜಸ್ಥಾನ : 31ರ ಹರೆಯದ ವ್ಯಕ್ತಿಯೋರ್ವ ನಗರದ ಡಿಸಿಎಂ ಫ್ಲೈ ಓವರ್ ಕೆಳಗೆ ರೈಲಿನಡಿ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಸತ್ಯನಾರಾಯಣ ಸೋನಿ ಎಂದು ಗುರುತಿಸಲಾಗಿದೆ. ಈತ ಕೋಟ ನಗರದ ಛವಾನಿ ರಾಮಚಂದ್ರಪುರ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ.
ಕುಡಿದ ಮತ್ತಿನಲ್ಲಿ ಸೋನಿ ರೈಲು ಹಳಿಯಲ್ಲಿ ನಡೆದು ಹೋಗುತ್ತಿದ್ದಾಗ ಆತ ಮೇಲೆ ರೈಲು ಹರಿದು ಆತ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ.