ವೈರಲ್ ವಿಡಿಯೋ: ಮೊಸಳೆಯ ವೇಷಭೂಷಣ ತೊಟ್ಟು ಮೊಸಳೆಯನ್ನೇ ಮಂಗ ಮಾಡಲು ಹೋಗಿ…
Team Udayavani, Dec 11, 2022, 11:48 AM IST
ನವದೆಹಲಿ: ಇಂಟರ್ ನೆಟ್ ನಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಮೊಸಳೆಯನ್ನು ಕೆಣಕಲು ಹೋದ ಯುವಕನೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಆನೆಯನು ಕೋಲಿನಿಂದ ಹೊಡೆದು, ಆನೆ ಅಟ್ಟಾಡಿಸಿಕೊಂಡು ಬಂದಾಗ ಬಾಲಕರೊಬ್ಬರು ಹೆದರಿಕೊಂಡು ಓಡಿ ಹೋಗಿರುವ ವಿಡಿಯೋ ತುಣುಕೊಂದು ಟ್ವಟರ್ ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆಯಾಗಿತ್ತು. ಮತ್ತೊಂದು ಅಂಥದ್ದೇ ವಿಡಿಯೋ ಸದ್ದು ಮಾಡುತ್ತಿದೆ.
ನರೇಂದ್ರ ಸಿಂಗ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ನದಿಯ ದಂಡೆಯ ಬದಿಯಲ್ಲಿದ್ದ ಮೊಸಳೆಯೊಂದನ್ನು ಯುವಕ ಕೆಣಕಲು ಹೋಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊಸಳೆಯೊಂದು ನದಿಯ ದಂಡೆಯಲ್ಲಿ ಕೂತಿದೆ. ಯುವಕನೊಬ್ಬನ ಮೊಸಳೆಯ ವೇಷಭೂಷಣವನ್ನು ತೊಟ್ಟು ಮೊಸಳೆಯ ಕಾಲನ್ನು ಎಳೆದು ಕೆಣಕುವಂತೆ ಮಾಡಿದ್ದಾನೆ.
10 ಸೆಕೆಂಡ್ ಗಳ ಈ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಮೊಸಳೆಯ ವೇಷಭೂಷಣ ತೊಟ್ಟು ಹುಚ್ಚಾಟ ಮರೆದ ಯುವಕನಿಗೆ, ಒಂದು ವೇಳೆ ನಿಜವಾದ ಮೊಸಳೆ ನಿನ್ನ ಕಡೆ ತಿರುಗಿದರೆ ಯಾರೂ ಕೂಡ ನಿನ್ನನು ಉಳಿಸಲು ಆಗಲ್ಲ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು ತನ್ನಷ್ಟಕ್ಕೇ ಇರುವ ಮೊಸಳೆಯನ್ನು ಯಾಕೆ ತೊಂದರೆ ಕೊಡುತ್ತಿದ್ದೀಯಾ ಎಂದು ಬರೆದುಕೊಂಡಿದ್ದಾರೆ.
कौन सा नशा किए थे…#crocodile #Viral #TrendingNow pic.twitter.com/VHTMF56ope
— Narendra Singh (@NarendraNeer007) December 8, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ