ಕೂಲ್‌ಡ್ರಿಂಕ್ಸ್‌ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್‌ಡೊನಾಲ್ಡ್ ವಿರುದ್ಧ ಆರೋಪ
Team Udayavani, May 26, 2022, 6:55 AM IST
ಗಾಂಧಿನಗರ: ಬಿಸಿಲ ಬೇಗೆ ತಣಿಸಿಕೊಳ್ಳಲೆಂದು ಖರೀದಿಸಲಾದ ತಂಪು ಪಾನೀಯದಲ್ಲಿ ಹುಳವೋ, ಕ್ರಿಮಿಯೋ ಕಂಡುಬಂದರೆ ಹೇಗಿರುತ್ತದೆ? ಆದರೆ, ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೆಕ್‌ಡೊನಾಲ್ಡ್‌ನಲ್ಲಿ ಗ್ರಾಹಕರೊಬ್ಬರು ಖರೀದಿಸಿದ ತಂಪು ಪಾನೀಯದಲ್ಲಿ ಹುಳ, ಹುಪ್ಪಡೆಯಲ್ಲ ಹಲ್ಲಿಯೇ ತೇಲಾಡಿದೆ!
ಭಾರ್ಗವ್ ಜೋಶಿ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವಿಡಿಯೋ ಹಂಚಿಕೊಂಡಿದ್ದಾರೆ. “ತಂಪು ಪಾನೀಯ ಖರೀದಿಸಿ, ಎರಡು ಗುಟುಕು ಕುಡಿಯುವಷ್ಟರಲ್ಲಿ ಈ ಹಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್‌ಗೆ ದೂರು ನೀಡಿ 4 ಗಂಟೆ ಕಾಯ್ದರೂ ಮೆಕ್‌ಡೊನಾಲ್ಡ್ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಪಾನೀಯಕ್ಕೆ ನಾವು ಕೊಟ್ಟಿದ್ದ 300 ರೂ. ಅನ್ನು ವಾಪಸು ಕೊಡುವುದಾಗಿ ಹೇಳುತ್ತಿದ್ದಾರೆ. ಒಬ್ಬರ ಜೀವಕ್ಕೆ 300 ರೂ. ಬೆಲೆ ಕಟ್ಟುವುದೇ’ ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಈ ವಿಡಿಯೋ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆಯೇ ಅಹಮದಾಬಾದ್‌ನ ಮಹಾನಗರ ಪಾಲಿಕೆಯು ಮೆಕ್‌ಡೊನಾಲ್ಡ್ ಶಾಖೆಗೆ ಬೀಗ ಮುದ್ರೆ ಜಡಿದಿದೆ. ಭಾರ್ಗವ್ ಅವರು ಪಾಲಿಕೆಗೆ ಧನ್ಯವಾದ ತಿಳಿಸಿದ್ದಾರೆ.
ಮೆಕ್‌ಡೊನಾಲ್ಡ್ ಪ್ರತಿಕ್ರಿಯೆ:
ಈ ಬಗ್ಗೆ ಮೆಕ್‌ಡೊನಾಲ್ಡ್ ಕೂಡ ಪ್ರತಿಕ್ರಿಯಿಸಿದ್ದು, “ನಮ್ಮಲ್ಲಿ ಸ್ವಚ್ಛತೆ ಮತ್ತು ಗ್ರಾಹಕರ ರಕ್ಷಣೆ ವಿಚಾರದಲ್ಲಿಯೇ 42 ನಿಯಮಗಳಿವೆ. ಅವುಗಳನ್ನು ಎಲ್ಲ ಶಾಖೆಗಳಲ್ಲಿ ಕಟ್ಟುನಿಟ್ಟಿನಿಂದ ಪಾಲಿಸಲಾಗುತ್ತಿದೆ. ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋವಾ ಕಾರವಾರ ಗಡಿಯಲ್ಲಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದ ಟ್ರಕ್
ಆದಾಯ ತೆರಿಗೆ ಇಲಾಖೆಯಿಂದ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯ
ಮುಂಬೈ ಜನತೆಗೆ ದ್ರೋಹ ಎಸಗಬೇಡಿ: ಮೆಟ್ರೋ ಕಾರ್ ಶೆಡ್ ಸ್ಥಳಾಂತರಕ್ಕೆ ಠಾಕ್ರೆ ತಿರುಗೇಟು
Watch Video: ಮುಂಬೈಯಲ್ಲಿ ಭಾರೀ ಮಳೆ, ಹಲವು ಪ್ರದೇಶ ಜಲಾವೃತ: ಆರೆಂಜ್ ಅಲರ್ಟ್ ಘೋಷಣೆ
ಸಿಸಿಟಿವಿಯಲ್ಲಿ ಸೆರೆ: ಕೇರಳ- ಆಡಳಿತಾರೂಢ ಸಿಪಿಐಎಂ ಕೇಂದ್ರ ಕಚೇರಿ ಮೇಲೆ ಬಾಂಬ್ ದಾಳಿ