ಮೋದಿ ಭಾರತದ 3ನೇ ಯಶಸ್ವೀ ಪ್ರಧಾನಿ: ರಾಮಚಂದ್ರ ಗುಹಾ ಬಣ್ಣನೆ
Team Udayavani, Mar 31, 2017, 10:00 AM IST
ಹೊಸದಿಲ್ಲಿ: ನರೇಂದ್ರ ಮೋದಿ ಅವರು ಜಾತಿ, ಭಾಷೆಯ ಗಡಿಗಳನ್ನು ಮೀರಿ ವರ್ಚಸ್ಸು ಹೊಂದಿರುವ ನಾಯಕ ಎಂದು ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಬಣ್ಣಿಸಿದ್ದಾರೆ.
ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಭಾರತ್ ಸಮ್ಮಿತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಗುಹಾ ಅವರು ’68 ರ ಹರೆಯದ ಮೋದಿ ಭಾರತದ ಅತೀ ಯಶಸ್ವೀ 3 ನೇ ಪ್ರಧಾನಿ’ ಎಂದರು.
‘ಜವಹಾರ್ ಲಾಲ್ ನೆಹರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿ ಅವರಂತೆ ಮೋದಿ ಅವರೂ ಆಜ್ಞೆ, ಅಧಿಕಾರ ಶೈಲಿ,ಸಮಗ್ರ ಭಾರತದ ಕುರಿತಾಗಿನ ದೂರದೃಷ್ಟಿ, ಜಾತಿ, ಧರ್ಮ, ಭಾಷೆಯ ಎಲ್ಲೆ
ಮೀರಿ ವರ್ಚಸ್ಸು ಹೊಂದಿದ ನಾಯಕ’ಎಂದರು.
‘ಭಾರತದ ರಾಜಕೀಯದಲ್ಲಿ ಜಾತಿ ಪದ್ಧತಿ ಮತ್ತು ಮಹಿಳೆಯರ ವಿರುದ್ಧದ ತಾರತಮ್ಯ ನಿರ್ವಿವಾದದ ಸತ್ಯಗಳು’ ಎಂದರು.