ಮಹಾರಾಷ್ಟ್ರ : ನಕ್ಸಲರಿಂದ ಪಿಎಲ್ಜಿಎ ಸಪ್ತಾಹ; ಟ್ರಕ್ಕಿಗೆ ಬೆಂಕಿ
Team Udayavani, Dec 3, 2018, 4:25 PM IST
ನಾಗ್ಪುರ, ಮಹಾರಾಷ್ಟ್ರ : ಮಹಾರಾಷ್ಟ್ರದ ಗಡ್ಚಿರೋಲಿ ಯಲ್ಲಿನ ಗಣಿಯೊಂದರ ಸಮೀಪ ನಕ್ಸಲರು ಟ್ರಕ್ ಸುಟ್ಟಿರುವುದಾಗಿ ವರದಿಯಾಗಿದೆ; ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗಡ್ಚಿರೋಲಿಯ ಏತಪಳ್ಳಿ ಯಲ್ಲಿನ ಸೂರಜ್ಗಢದಲ್ಲಿರುವ ಕಬ್ಬಿಣದದಿರಿನ ಗಣಿಯಿಂದ ಹತ್ತು ಕಿ.ಮೀ. ದೂರದಲ್ಲಿ ಟ್ರಕ್ ಸುಟ್ಟ ಘಟನೆ ನಿನ್ನೆ ಭಾನುವಾರ ರಾತ್ರಿ 10.30ರ ಹೊತ್ತಿಗೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ.
ನಕ್ಸಲರು ಕಳೆದ ಭಾನುವಾರದಿಂದ ಆಚರಿಸುತ್ತಿರುವ ಒಂದು ವಾರ ಅವಧಿಯ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಇಜಿಎ) ಸಪ್ತಾಹದ ಅಂಗವಾಗಿ ಟ್ರಕ್ ಸುಟ್ಟಿರುವುದಾಗಿ ವರದಿಗಳು ತಿಳಿಸಿವೆ.