ಡ್ರೋನ್ ತಂತ್ರಜ್ಞಾನ ಮಾದರಿಯಲ್ಲಿ ಅಂಗಾಂಗ ಸಾಗಣೆಗೆ ಸಚಿವ ನಿತಿನ್ ಗಡ್ಕರಿ ಚಾಲನೆ
Team Udayavani, Sep 4, 2022, 7:15 AM IST
ಚೆನ್ನೈ: ಇನ್ನು ಮುಂದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಂಗಾಂಗಗಳನ್ನು ಸಾಗಿಸಲು ಗ್ರೀನ್ ಕಾರಿಡಾರ್ ನಿರ್ಮಿಸಬೇಕಾಗಿಲ್ಲ.
ಏಕೆಂದರೆ ಅಂಗಾಂಗಗಳ ಸಾಗಣೆ ಸುಲಭವಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಡ್ರೋನ್ ತಂತ್ರಜ್ಞಾನದ ಮಾದರಿಯನ್ನು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಅನಾವರಣಗೊಳಿಸಿದ್ದಾರೆ.
ತಮಿಳುನಾಡಿನ ಚೆನ್ನೈನ ಎಂಜಿಎಂ ಆಸ್ಪತ್ರೆಯು ಸ್ಥಳೀಯ ಡ್ರೋನ್ ಸಂಸ್ಥೆಯೊಂದಿಗೆ ಸೇರಿಕೊಂಡು ಈ ಮಾದರಿಯನ್ನು ತಯಾರಿಸಿದೆ.
“ಅಂಗಾಂಗ ಸಾಗಣೆ ಮಾಡುವಾಗ ರಸ್ತೆಯ ಮಾರ್ಗದಲ್ಲಾಗುವ ಸಮಯ ವ್ಯರ್ಥವನ್ನು ತಪ್ಪಿಸುವ ನಿಟ್ಟಿನಲ್ಲಿ ನಾವು ಡ್ರೋನ್ ಬಳಕೆ ಮಾಡಲಾರಂಭಿಸಿದ್ದೇವೆ. ಇದು ಆದಷ್ಟು ಬೇಗ ಅಂಗಾಂಗವನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪಿಸುತ್ತದೆ.
ಸದ್ಯ ನಮ್ಮ ಡ್ರೋನ್‌ಗಳು 20ಕಿ.ಮೀ. ದೂರದವರೆಗೆ ಅಂಗಾಂಗವನ್ನು ಹೊತ್ತು ಸಾಗಬಲ್ಲವು’ ಎಂದಿದ್ದಾರೆ ಎಂಜಿಎಂ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್.