ಕೇಂದ್ರ ಸರಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ ಇಲ್ಲ: ಕೇಂದ್ರ
Team Udayavani, Mar 21, 2018, 4:23 PM IST
ಹೊಸದಿಲ್ಲಿ : ಕೇಂದ್ರ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಯಾವುದೇ ಆಲೋಚನೆ ಸರಕಾರಕ್ಕೆ ಇಲ್ಲ ಎಂದು ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವ ಜೀತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಬನ್ಸಿàಲಾಲ್ ಮಹಾತೋ ಅವರ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ.
2013ರಲ್ಲಿ ಏಳನೇ ವೇತನ ಆಯೋಗದ ಅನುಷ್ಠಾನವನ್ನು ಅನುಸರಿಸಿ ಕೇಂದ್ರ ಸರಕಾರಿ ನೌಕರರ ನಿವೃತ್ತಿ ವಯಸ್ಸು ಈಗಿನ 60ರಿಂದ 62ಕ್ಕೆ ಏರಬಹುದೆಂಬ ಊಹಾಪೋಹ ತೀವ್ರವಾಗಿತ್ತು. ಆದರೆ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಇರಾದೆ ಸರಕಾರಕ್ಕೆ ಇಲ್ಲವೆಂದು ಸಚಿವ ಜೀತೇಂದ್ರ ಸಿಂಗ್ ಸ್ಪಷ್ಟಪಡಿಸಿದರು.