ಜಮ್ಮು ಕಾಶ್ಮೀರದಲ್ಲಿ ಐಸ್ಜೆಕೆ ಸಂಘಟನೆ ಸಕ್ರಿಯವಾಗಿಲ್ಲ: ಕೇಂದ್ರ
Team Udayavani, Aug 1, 2018, 3:41 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಐಸ್ಜೆಕೆ ಸಂಘಟನೆಯ ಯಾವುದೇ ಉಗ್ರರು ಸಕ್ರಿಯರಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ಬುಧವಾರ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್ ಸ್ಟೇಟ್ ಮತ್ತು ಪಾಕ್ ಧ್ವಜವನ್ನು ಹಾರಿಸುವ ಸಮಾಜ ವಿರೋಧಿ ಶಕ್ತಿಗಳನ್ನು ಕಾನೂನಿನಡಿ ಬಗ್ಗು ಬಡಿಯಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಹಂಸರಾಜ್ ಆಹಿರ್ ಇಂದು ರಾಜ್ಯಸಭೆಗೆ ತಿಳಿಸಿದರು.
2015ರಲ್ಲಿ 8 ಪ್ರಕರಣಗಳು, 2016ರಲ್ಲಿ 31 ಪ್ರಕರಣಗಳು ಮತ್ತು 2017ರಲ್ಲಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದವರು ಹೇಳಿದರು.