ಪಿಎಂ ಆವಾಸ್ ವೆಬ್ಸೈಟಲ್ಲಿ ಆಧಾರ್ ಮಾಹಿತಿ ಸೋರಿಕೆ?
Team Udayavani, Apr 27, 2017, 1:15 PM IST
ಹೊಸದಿಲ್ಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡುವ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಕೂಗು ಕೇಳುತ್ತಿರುವಂತೆಯೇ ಪ್ರಧಾನಮಂತ್ರಿ ಆವಾಸ್ ಯೋಜನೆ ವೆಬ್ಸೈಟ್ನಲ್ಲಿ ಯೋಜನೆಯ ಸದುಪಯೋಗ ಪಡೆದವರ ಖಾಸಗಿ ಮಾಹಿತಿಗಳು ಬಹಿ ರಂಗವಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರಕಾರಿ ಸ್ವಾಮ್ಯದ ವೆಬ್ಸೈಟ್ನಲ್ಲಿ ಇಂಥ ಘಟನೆ ನಡೆಯುತ್ತಿವೆ. ಇದೇ ವೇಳೆ ಗುಜರಾತ್ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ವಿಭಾಗದ ವೆಬ್ಸೈಟ್ನಲ್ಲಿ ಸಾವಿರಾರು ವಿದ್ಯಾರ್ಥಿಗಳ ಆಧಾರ್ ಮಾಹಿತಿ ಸಾರ್ವಜನಿಕವಾಗಿವೆ. ಇದೇ ವೇಳೆ ಝಾರ್ಖಂಡ್ನಲ್ಲಿ ಮಾಹಿತಿ ಸೋರಿಕೆ ಪ್ರಕರಣದ ಬಳಿಕ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೂ ಮಾಹಿತಿ ಬಗ್ಗೆ ಎಚ್ಚರ ವಹಿಸುವಂತೆ ಆದೇಶ ನೀಡಿದೆ.