ಮಧುಮೇಹ ಸೇರಿ 74 ಔಷಧಗಳ ಬೆಲೆ ನಿಗದಿ
Team Udayavani, Feb 28, 2023, 7:25 AM IST
ನವದೆಹಲಿ: ಮಧುಮೇಹ, ಬಿಪಿ ಸೇರಿದಂತೆ 74 ಔಷಧಗಳು ಚಿಲ್ಲರೆ ಮಾರಾಟ ಬೆಲೆಯನ್ನು ರಾಷ್ಟ್ರೀಯ ಔಷಧೀಯ ಬೆಲೆ ನಿಗದಿ ಪ್ರಾಧಿಕಾರ(ಎನ್ಪಿಪಿಎ) ಸೋಮವಾರ ನಿಗದಿಪಡಿಸಿದೆ.
ಫೆ.21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಧಾರದಂತೆ 2013ರ ಔಷಧಗಳ(ಬೆಲೆ ನಿಯಂತ್ರಣ) ಆದೇಶದ ಅಡಿಯಲ್ಲಿ ಎನ್ಪಿಪಿಎ ಬೆಲೆಯನ್ನು ನಿಗದಿಪಡಿಸಿದೆ. ಇದೇ ವೇಳೆ ಮೂಛೆìರೋಗ, ನ್ಯೂಟ್ರೋಪೆನಿಯಾ ಸೇರಿದಂತೆ 80 ಔಷಧಗಳ ಗರಿಷ್ಠ ಬೆಲೆ ಮಿತಿಯನ್ನು ಎನ್ಪಿಪಿಎ ಪರಿಷ್ಕರಿಸಿದೆ.
ಔಷಧಗಳ ಅನಿಯಂತ್ರಿತ ಬೆಲೆಗಳನ್ನು ನ್ಯಾಯಸಮ್ಮತವಾಗಿಸುವ ನಿಟ್ಟಿನಲ್ಲಿ ಎನ್ಪಿಪಿಎ ಮೇಲ್ವಿಚಾರಣೆ ನಡೆಸುತ್ತದೆ. ಅಲ್ಲದೇ ನಿಯಂತ್ರಿತ ಔಷಧಗಳಿಗೆ ಗ್ರಾಹಕರಿಂದ ತಯಾರಕರು ಅಧಿಕವಾಗಿ ವಿಧಿಸಿದ ಮೊತ್ತವನ್ನು ಹಿಂತಿರುಗಿಸುವಂತೆ ಮಾಡುವಲ್ಲಿ ಎನ್ಪಿಪಿಎ ಕಾರ್ಯಪ್ರವೃತ್ತವಾಗಿರುತ್ತದೆ.