ಎನ್‌ಎಸ್‌ಜಿಗಿಲ್ಲ ಮುಖ್ಯಸ್ಥ
Team Udayavani, Oct 29, 2018, 12:12 PM IST
ಹೊಸದಿಲ್ಲಿ: ಭಾರತದ ಅತ್ಯುನ್ನತ ಭಯೋತ್ಪಾದನಾ ನಿಗ್ರಹ ದಳ ಎನ್‌ಎಸ್‌ಜಿ(ರಾಷ್ಟ್ರೀಯ ಭದ್ರತಾ ಪಡೆ) ಮಿಲಿಟರಿ ಕಾರ್ಯಾಚರಣೆ ವಿಭಾಗಕ್ಕೆ ಕಳೆದ ಆರು ತಿಂಗಳಿಂದಲೂ ಮುಖ್ಯಸ್ಥರೇ ಇಲ್ಲ.
ಇದು ತುರ್ತು ಸನ್ನಿವೇಶದಲ್ಲಿ ಪಡೆಯ ಪ್ರತಿಕ್ರಿಯೆ ಹಾಗೂ ಯೋಜನೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ. ಈ ಪಡೆಯು ಗೃಹ ಸಚಿವಾಲಯದ ಅಡಿಯಲ್ಲಿದ್ದು, ಶೀಘ್ರದಲ್ಲೇ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದೆ. ಸೇನೆಯ ಮೇಜರ್ ಜನರಲ್ ಹುದ್ದೆಯ ಅಧಿಕಾರಿಯನ್ನು ಎನ್‌ಎಸ್‌ಜಿಯ ಈ ವಿಭಾಗಕ್ಕೆ ನೇಮಿಸಲಾಗುತ್ತದೆ. ಮೇಜರ್ ಜನರಲ್ ಶಶಾಂಕ್ ಮಿಶ್ರಾ ಭಡ್ತಿಯ ಮೇರೆಗೆ ತನ್ನ ಕೇಡರ್‌ಗೆ ವಾಪಸಾಗಿದ್ದರಿಂದ ಈ ಸ್ಥಾನ ಖಾಲಿ ಇದೆ.