ಮಲಯಾಳಂ ಸಾಕ್ಷರತೆ: ಶೇ.100 ಅಂಕ ಪಡೆದ ಹೊರ ರಾಜ್ಯದ ಕಾರ್ಮಿಕರು
Team Udayavani, Dec 11, 2018, 4:15 PM IST
ತಿರುವನಂತಪುರ : ಇಲ್ಲಿನ ಐಟಿ ಟೆಕ್ನೋ ಪಾರ್ಕ್ ನ ಗಾರ್ಮೆಂಟ್ ಘಟಕದ ಉದ್ಯೋಗಿಯಾಗಿರುವ ಒಡಿಶಾ ಮೂಲದ ಮುದದ್ ರೇವತಿ ಅವರು ಅತ್ಯಲ್ಪ ಕಾಲದೊಳಗೆ ಮಲಯಾಳಂ ಭಾಷೆಯನ್ನು ಕಲಿತು ಸಾಕ್ಷರತೆ ಪರೀಕ್ಷೆಯಲ್ಲಿ ಶೇ.ನೂರು ಅಂಕ ಗಳಿಸಿರುವ ಸಾಧನೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಕೇರಳ ಸರಕಾರದ ಕೇರಳ ರಾಜ್ಯ ಸಾಕ್ಷರತಾ ಅಭಿಯಾನ ಪ್ರಾಧಿಕಾರ ನಡೆಸಿರುವ ಈ ಪರೀಕೆಯಲ್ಲಿ ಮಲಯಾಳಂ ಓದುವ, ಬರೆಯುವ ಮತ್ತು ಗಣಿತ ಕೌಶಲವು ಸಾಬೀತಾಗುತ್ತದೆ.
ರೇವತಿ ಅವರ ಹಾಗೆ ಬಿಹಾರದ ವಿಕಿ ಕುಮಾರ್ ಎಂಬ ಕಾರ್ಮಿಕ ಕೂಡ ಶೇ.100 ಸಾಕ್ಷರತೆ ಅಂಕ ಪಡೆಯುವ ಸಾಧನೆ ಮಾಡಿದ್ದಾರೆ.