ಮಗು ಜತೆ ಆ್ಯಂಕರ್ ಕಣ್ಣೀರು!
Team Udayavani, Jan 12, 2018, 6:05 AM IST
ಹೊಸದಿಲ್ಲಿ: ಪುಟಾಣಿ ಮಗುವೊಂದನ್ನು ತನ್ನ ಮುಂದೆ ಕೂರಿಸಿಕೊಂಡು ಸುದ್ದಿ ಓದುತ್ತಿದ್ದ ಪಾಕಿಸ್ಥಾನಿ ವಾಹಿನಿಯ ಆ್ಯಂಕರ್ ವಿಶ್ವದ ಗಮನ ಸೆಳೆದಿದ್ದಾರೆ. ಈ ಮೂಲಕ ವೀಕ್ಷಕರ ಮುಂದೆ ಆ್ಯಂಕರ್ ದಾಖಲಿಸಿರುವ ಹೇಳಿಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ವೈರಲ್ ಆಗಿದೆ.
ಇಲ್ಲಿನ ಕಸೂರ್ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾದ ಘಟನೆಯನ್ನು ಖಂಡಿಸಿ ಸಮಾ ಟಿವಿ ಚಾನೆಲ್ನ ಹಿರಿಯ ಆ್ಯಂಕರ್ ಕಿರಣ್ ನಾಜ್ ಅವರು ತನ್ನ ಮಗುವನ್ನು ಜತೆಗೆ ಕೂರಿಸಿಕೊಂಡು ಸುದ್ದಿ ಓದುವ ಮೂಲಕ ಗಮನ ಸೆಳೆದರು. ಕಾಮುಕರಿಂದ ಮಕ್ಕಳಿಗೆ ರಕ್ಷಣೆ ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಸುದ್ದಿ ಓದುವುದಕ್ಕೂ ಮೊದಲು, “ನಾನು ಇಂದು ನಿಮ್ಮ ಮುಂದೆ ಸುದ್ದಿ ಓದುತ್ತಿರುವ ಸುದ್ದಿ ವಾಚಕಿಯಷ್ಟೇ ಅಲ್ಲ. ನಾನೊಬ್ಬ ತಾಯಿ, ಆ ಕಾರಣಕ್ಕಾಗಿ ಮಗುವಿನೊಂದಿಗೆ ಕುಳಿತಿದ್ದೇನೆ” ಎಂದು ಭಾವೋದ್ವೇಗದಿಂದ ನೇರಪ್ರಸಾರದಲ್ಲಿ ನುಡಿದು ಸುದ್ದಿ ಆರಂಭಿಸಿದರು. ಇದನ್ನು ಹೇಳುವಾಗ ನಾಜ್ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದ್ದವು.
ಬುಲೆಟಿನ್ ಆರಂಭದಲ್ಲಿ ಗುರುವಾರ ನಡೆದ 7 ವರ್ಷದ ಬಾಲಕಿ ಜೈನಬ್ ಅನ್ಸಾರಿ ಮೇಲಿನ ಅತ್ಯಾಚಾರ, ಹತ್ಯೆಯ ಸುದ್ದಿಯನ್ನು ಟಿವಿ ಬಿತ್ತರಿಸಿ, ಖಂಡಿಸಿದ ಪರಿ ಹೀಗಿತ್ತು. ಈ ವೀಡಿಯೋ ಈಗ ವಿಶ್ವದ ಅನೇಕ ಹೆಣ್ಣು ಹೆತ್ತವರ ಕಣ್ಣುಗಳನ್ನು ತುಂಬುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು