ತೃತೀಯ ಲಿಂಗಿಗಳಿಗೆ ಮೀಸಲು ನೀಡಿ: ಸಂಸತ್ ಸಮಿತಿ
Team Udayavani, Apr 27, 2017, 11:34 AM IST
ಹೊಸದಿಲ್ಲಿ: ತೃತೀಯ ಲಿಂಗಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಮಸೂದೆ ಪರಿಶೀಲಿಸುತ್ತಿರುವ ಸಂಸತ್ತಿನ ‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ’ ಮೀಸಲಾತಿ ಪರವಾದ ನಿಲುವು ಹೇಳಿದೆ. ತೃತೀಯ ಲಿಂಗಿ ಸಮುದಾಯ ದೇಶದಲ್ಲಿ ತೀರಾ ಸಂಕಷ್ಟದಲ್ಲಿರುವ ಸಮುದಾಯವಾಗಿದೆ. ತೃತೀಯಲಿಂಗಿಗಳೂ ಗೌರವಯುತವಾದ ಜೀವನ ನಡೆಸಬೇಕು. ಅದಕ್ಕಾಗಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯ ಅಗತ್ಯ ಅವರಿಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.